ಪಡುಕೆರೆಯಲ್ಲಿ ಮರೀನಾ ನಿರ್ಮಾಣಕ್ಕೆ ವಿರೋಧ
Update: 2021-01-12 22:02 IST
ಉಡುಪಿ, ಜ.12: ಮಲ್ಪೆ ಪಡುಕೆರೆಯಲ್ಲಿ ಮರೀನಾ ನಿರ್ಮಾಣಕ್ಕೆ ಸ್ಥಳೀಯ ಮೀನುಗಾರರಿಂದ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳುವ ನಿಟ್ಟಿನಲ್ಲಿ ಜ.15ರಂದು ಸಂಜೆ 4.30ಕ್ಕೆ ಪಡುಕೆರೆ ಶ್ರೀ ಬಾಲಾಂಜನೇಯ ಪೂಜಾ ಮಂದಿರ ದಲ್ಲಿ ಸಭೆ ಕರೆಯಲಾಗಿದೆ.
ಈ ಹಿನ್ನೆಲೆಯಲ್ಲಿ ಊರಿನ ಎಲ್ಲ ಭಜನಾ ಮಂದಿರ, ದೇವಸ್ಥಾನ ಹಾಗೂ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪಡುಕೆರೆ ಸರ್ವ ಸಂಸ್ಥೆ ಗಳ ಒಕ್ಕೂಟವನ್ನು ರಚಿಸಲಾಗಿದೆ. ಮರೀನಾ ನಿರ್ಮಾಣವಾದರೆ ಪಡುಕೆರೆಗೆ ಹಾಗೂ ಮೀನು ಗಾರಿಕೆ ಬಹಳ ದೊಡ್ಡ ಅಪಾಯ ಇದೆ. ಈ ಸಂಬಂಧ ಊರಿನ ಎಲ್ಲ ನಾಗರಿಕರ ಸಮ್ಮುಖದಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಒಕ್ಕೂಟ ತಿಳಿಸಿದೆ.