‘ಸಮುದಾಯ ರೋಗನಿರೋಧತೆ’ ಈ ವರ್ಷ ಸಾಧ್ಯವಾಗದು: ವಿಶ್ವ ಆರೋಗ್ಯ ಸಂಸ್ಥೆ

Update: 2021-01-12 17:16 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಜ. 12: ಸಾಮೂಹಿಕ ಲಸಿಕಾ ಕಾರ್ಯಕ್ರಮಗಳು ಆರಂಭಗೊಂಡಿವೆಯಾದರೂ, ಕೊರೋನ ವೈರಸ್ ವಿರುದ್ಧ ‘ಸಮುದಾಯ ರೋಗನಿರೋಧತೆ’ ಈ ವರ್ಷ ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿಗಳು ಹೇಳಿದ್ದಾರೆ.

ಲಸಿಕೆಗಳನ್ನು ನೀಡಲಾಗುತ್ತಿರುವಂತೆಯೇ, ಜಗತ್ತಿನಾದ್ಯಂತ, ಅದರಲ್ಲೂ ಮುಖ್ಯವಾಗಿ ಯುರೋಪ್‌ನಲ್ಲಿ ಕೊರೋನ ವೈರಸ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಹಾಗಾಗಿ, ದೇಶಗಳು ಹೊಸದಾಗಿ ಕೊರೋನ ವೈರಸ್ ಸಂಬಂಧಿ ನಿರ್ಬಂಧಗಳನ್ನು ಹೇರುತ್ತಿವೆ.

ವೈರಸ್‌ನ ಹರಡುವಿಕೆಯನ್ನು ನಿಲ್ಲಿಸಲು ಬೇಕಾಗುವಷ್ಟು ಲಸಿಕೆಗಳನ್ನು ಉತ್ಪಾದಿಸಲು ಹಾಗೂ ಕೊಡಲು ಸಮಯ ತಗಲುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಸೋಮವಾರ ಎಚ್ಚರಿಸಿದರು.

‘‘ಕೊರೋನ ವೈರಸ್ ವಿರುದ್ಧ ಸಮುದಾಯ ರೋಗ ನಿರೋಧತೆಯನ್ನು 2021ರಲ್ಲಿ ಸಾಧಿಸಲು ನಮಗೆ ಸಾಧ್ಯವಾಗುವುದಿಲ್ಲ’’ ಎಂದು ಅವರು ನುಡಿದರು. ಸುರಕ್ಷಿತ ಅಂತರ, ಕೈತೊಳೆಯುವುದು ಮತ್ತು ಮುಖಗವಸು ಧರಿಸುವುದನ್ನು ನಾವು ಮುಂದುವರಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News