ಯುನಿವೆಫ್ ಕರ್ನಾಟಕದಿಂದ ಪ್ರಬಂಧ ಸ್ಪರ್ಧೆ
ಮಂಗಳೂರು, ಜ.12: ಯುನಿವೆಫ್ ಕರ್ನಾಟಕ ಆಯೋಜಿಸಿರುವ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಅಭಿಯಾನದ ಅಂಗವಾಗಿ ಸಾರ್ವಜನಿಕರಿಗಾಗಿ ‘ಮಾನವ ಸಂಬಂಧಗಳು ಮತ್ತು ಪ್ರವಾದಿ ಮುಹಮ್ಮದ್ (ಸ)’ ಎಂಬ ವಿಷಯದಲ್ಲಿ ಪ್ರಬಂಧ ಸ್ಪರ್ಧೆ ಆಯೋಜಿಸಿದೆ.
ಪ್ರಬಂಧವಿ ಕನ್ನಡ ಭಾಷೆಯಲ್ಲಿರಬೇಕು. ಎ4 ಕಾಗದದ ಒಂದೇ ಮಗ್ಗುಲಲ್ಲಿ 4 ಪುಟಗಳಿಗೆ ಮೀರದಂತೆ ಬರೆಯಬೇಕು ಹೆಸರು, ಪೂರ್ಣ ವಿಳಾಸ, ಫೋಟೋ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿರಬೇಕು. ವಿಜೇತರಿಗೆ 3,000 (ಪ್ರಥಮ). 2,000 (ದ್ವಿತೀಯ) ಬಹುಮಾನ ನೀಡಲಾಗುವುದು.
ಆಸಕ್ತರು ಜ.23ರೊಳಗೆ ಪ್ರಬಂಧವನ್ನು ಸಾಮಾನ್ಯ ಅಂಚೆಯಲ್ಲಿ ಯುನಿವೆಫ್ ಕರ್ನಾಟಕ ‘ಅರಿಯಿರಿ ಪ್ರಬಂಧ ಸ್ಪರ್ಧಾ ವಿಭಾಗ, ಪೋಸ್ಟ್ ಬಾಕ್ಸೃ್ ಸಂಖ್ಯೆ 579, ಅಂಚೆ ಕಂಕನಾಡಿ, ಮಂಗಳೂರು -575 002 ಈ ವಿಳಾಸಕ್ಕೆ ಕಳುಹಿಸಬೇಕು. (ಸ್ಪೀಡ್ ಪೋಸ್ಟ್,ರಿಜಿಸ್ಟರ್ಡ್ ಮತ್ತು ಕೊರಿಯರ್‌ನಲ್ಲಿ ಬಂದ ಅಂಚೆಗಳನ್ನು ಸ್ವೀಕರಿಸಲಾಗುವುದಿಲ್ಲ). ಮಾಹಿತಿಗೆ ಯು.ಕೆ.ಖಾಲಿದ್ (ಮೊ.ಸಂ:98451 99931) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.