ವಾಶಿಂಗ್ಟನ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಟ್ರಂಪ್

Update: 2021-01-12 18:01 GMT

 ವಾಶಿಂಗ್ಟನ್, ಜ. 12: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಷ್ಟ್ರ ರಾಜಧಾನಿ ವಾಶಿಂಗ್ಟನ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಜನವರಿ 20ರಂದು ನಿಯೋಜಿತ ಅಧ್ಯಕ್ಷ ಜೋ ಬೈಡನ್‌ರ ಪ್ರಮಾಣವಚನ ಸ್ವೀಕಾರಕ್ಕೆ ಮುನ್ನ ಗಲಭೆಗಳು ನಡೆಯಬಹುದು ಎಂಬುದಾಗಿ ಭದ್ರತಾ ಸಂಸ್ಥೆಗಳು ನೀಡಿರುವ ಎಚ್ಚರಿಕೆಯ ಹಿನ್ನೆಲೆಯಲ್ಲಿ ಅವರು ಈ ಕ್ರಮ ತೆಗೆದುಕೊಂಡಿದ್ದಾರೆ.

  ತುರ್ತು ಪರಿಸ್ಥಿತಿಯು ಸ್ಥಳೀಯ ಜನರ ಮೇಲೆ ಬೀರುವ ವ್ಯತಿರಿಕ್ತ ಪರಿಣಾಮಗಳನ್ನು ಬೀರದಂತೆ ಖಾತರಿಪಡಿಸಲು ಆಂತರಿಕ ಭದ್ರತಾ ಇಲಾಖೆ ಮತ್ತು ಕೇಂದ್ರೀಯ ತುರ್ತು ಪರಿಸ್ಥಿತಿ ನಿರ್ವಹಣಾ ಸಂಸ್ಥೆ (ಫೆಮ)ಗಳು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೋಮವಾರ ಬಿಡುಗಡೆ ಮಾಡಲಾದ ಹೇಳಿಕೆಯೊಂದು ಸೂಚಿಸಿದೆ.

ತುರ್ತು ಪರಿಸ್ಥಿತಿಯು ವಾಶಿಂಗ್ಟನ್‌ನಲ್ಲಿ ಸೋಮವಾರದಿಂದ ಜನವರಿ 24ರವರೆಗೆ ಜಾರಿಯಲ್ಲಿರುವುದು.

ಕಳೆದ ವಾರ ಟ್ರಂಪ್‌ರ ಸಾವಿರಾರು ಬೆಂಬಲಿಗರು ಅಮೆರಿಕ ಸಂಸತ್ತಿನ ಮೇಲೆ ನಡೆಸಿದ ದಾಳಿಯ ಹಿನ್ನೆಲೆಯಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News