ಯೆನೆಪೋಯ ಆಸ್ಪತ್ರೆ : ಜ.18ರಿಂದ ಬಾಹ್ಯ ನರ ಶಸ್ತ್ರ ಚಿಕಿತ್ಸಾ ಶಿಬಿರ

Update: 2021-01-13 11:07 GMT

ದೇರಳಕಟ್ಟೆ : ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಸರ್ಜರಿ ವಿಭಾಗದ ಆಶ್ರಯದಲ್ಲಿ ಜ.18ರಿಂದ 30ರವರೆಗೆ ರಜಾ ದಿನಗಳನ್ನು ಹೊರತುಪಡಿಸಿ ಬಾಹ್ಯ ನರ ಶಸ್ತ್ರ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ ಎಂದು ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಉಪ ವೈದ್ಯಕೀಯ ಅಧೀಕ್ಷಕ ಪ್ರಕಾಶ್ ಸಲ್ದಾನ್ಹ ತಿಳಿಸಿದರು.ನಗರದ ಪತ್ರಿಕಾಭವನದಲ್ಲಿ ಬುಧವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಹ್ಯ ನರ ಶಸಚಿಕಿತ್ಸೆಗಳು ದುಬಾರಿ ಆಗಿರುವುದರಿಂದ ಶಿಬಿರದಲ್ಲಿ ಪಾಲ್ಗೊಂಡು ಅತ್ಯಂತ ಕಡಿಮೆ ಖರ್ಚಿನಲ್ಲಿ ಮಾಡಬಹುದಾಗಿದೆ.

ತಜ್ಞರಿಂದ ಸಮಾಲೋಚನೆ, ರಕ್ತದೊತ್ತಡ, ಮಧುಮೇಹ, ಹಿಮೋಗ್ಲೋಬಿನ್, ಎಕ್ಸರೇ ಉಚಿತ ಸೇವೆಗಳಾಗಿದ್ದು, ಎನ್‌ಸಿವಿ ಮತ್ತು ವೈದ್ಯರು ಸೂಚಿಸಿದರೆ ಎಂಆರ್‌ಐ ಸ್ಕ್ಯಾನಿಂಗ್ ಶೇ.50ರಷ್ಟು ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ. ಶಸಚಿಕಿತ್ಸೆಯನ್ನು ಆಯುಷ್ಮಾನ್ ಕರ್ನಾಟಕ/ಕೇರಳ ಸ್ಕೀಮ್‌ನಡಿಯಲ್ಲಿ ಮಾಡಲಾಗುವುದು. ಸ್ಕೀಮ್ ಇಲ್ಲದವರಿಗೆ ಶೇ.50ರಷ್ಟು ರಿಯಾಯಿತಿ ನೀಡಲಾಗುವುದು ಎಂದು ತಿಳಿಸಿದರು.

ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಸಹ ಪ್ರಾಧ್ಯಾಪಕ ಡಾ ದೇವಿಪ್ರಸಾದ್ ಎಸ್. ಮಾತನಾಡಿ, ಮಣಿಕಟ್ಟಿನ ದೌರ್ಬಲ್ಯ, ಮುಖದ ಪಾರ್ಶ್ವವಾಯು, ಪಾದದ ನರ ದೌರ್ಬಲ್ಯ, ಬೆರಳಿನ ನರ ದೌರ್ಬಲ್ಯ, ನರದ ಗಡ್ಡೆಗಳು ಇವುಗಳನ್ನು ಶಿಬಿರದಲ್ಲಿ ಪಾಲ್ಗೊಂಡು ಕಡಿಮೆ ಖರ್ಚಿನಲ್ಲಿ ಶಸಚಿಕಿತ್ಸೆಯ ಮೂಲಕ ಸರಿಪಡಿಸಬಹುದಾಗಿದೆ. ಈ ಸೌಲಭ್ಯದ ಪ್ರಯೋಜನ ಪಡೆಯಲು 9141102295 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮುಂಚಿತವಾಗಿ ನೋಂದಣಿ ಮಾಡುವ ಅಗ್ಯವಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ ಪ್ರದೀಪ್ ಕುಲಾಲ್ ಆರ್., ವೈದ್ಯಕೀಯ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ. ಮೊಹಮ್ಮದ್ ಗುತ್ತಿಗಾರ್, ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ವಿಜಯಾನಂದ ಶೆಟ್ಟಿ ಬಿ. ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News