×
Ad

ನಮ್ಮ ನಾಡ ಒಕ್ಕೂಟ ಮಂಗಳೂರು ಘಟಕದ ಅಧ್ಯಕ್ಷರಾಗಿ ಡಾ.ಮುಹಮ್ಮದ್ ಆರಿಫ್ ಮಸೂದ್ ಆಯ್ಕೆ

Update: 2021-01-13 16:28 IST

ಮಂಗಳೂರು, ಜ.13: ನಮ್ಮ ನಾಡ ಒಕ್ಕೂಟದ ಮಂಗಳೂರು ತಾಲೂಕು ಘಟಕ ರಚನೆಯಾಗಿದ್ದು, ಅಧ್ಯಕ್ಷರಾಗಿ ಡಾ.ಮುಹಮ್ಮದ್ ಆರಿಫ್ ಮಸೂದ್ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಹನೀಫ್ ಹಾಜಿ ಬಂದರ್, ಸಾಜಿದ್ ಎ.ಕೆ., ಅಶ್ರಫ್ ಸುರತ್ಕಲ್, ಕಾರ್ಪೊರೇಟರ್ ಶಂಸುದ್ದೀನ್ ಕುದ್ರೋಳಿ, ಪ್ರಧಾನ ಕಾರ್ಯದರ್ಶಿಯಾಗಿ ರಫೀಕ್ ಮಾಸ್ಟರ್, ಕೋಶಾಧಿಕಾರಿಯಾಗಿ ಮಕ್ಬೂಲ್, ಕಾರ್ಯದರ್ಶಿಗಳಾಗಿ ಆಬಿದ್, ಎನ್.ಕೆ.ಅಬೂಬಕರ್, ಕೆ.ಶರೀಫ್ ಸುರತ್ಕಲ್, ನೌಷಾದ್ ಹಾಜಿ ಸೂರಲ್ಪಾಡಿ, ಮಾಧ್ಯಮ ಕಾರ್ಯದರ್ಶಿಯಾಗಿ ಮುಹಮ್ಮದ್ ನವಾಝ್, ಕಾನೂನು ಸಲಹೆಗಾರರಾಗಿ ಅಡ್ವಕೇಟ್ ಶೇಖ್ ಇಸಾಕ್ ಕಡಬ ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸೈಯದ್ ಬಾಷಾ ತಂಙಳ್, ಸಂಶುದ್ದೀನ್, ಸಲೀಮ್, ಯಾಸೀನ್, ಅಜ್ಮಲ್, ಯಕೀನುಲ್ಲಾ, ಬಶೀರ್, ಹನೀಫ್, ನವೀದ್, ನವಾಝ್, ಅಬೂಬಕರ್ ಆಸಿಫ್ ಆಯ್ಕೆಯಾಗಿದ್ದಾರೆ.

ಮಂಗಳೂರು ತಾಲೂಕು ಘಟಕ ರಚನಾ ಸಭೆಯಲ್ಲಿ ನಮ್ಮ ನಾಡ ಒಕ್ಕೂಟ ಕೇಂದ್ರ ಸಮಿತಿಯ ಕೋಶಾಧಿಕಾರಿ ಅಬ್ದುಲ್ ಹಮೀದ್ ಮೂಡುಬಿದಿರೆ, ಕೇಂದ್ರ ಸಮಿತಿಯ ಟ್ರಸ್ಟಿಗಳಾದ ಸೈಯದ್ ಸಿರಾಜ್ ಅಹ್ಮದ್, ಎಸ್.ಎ.ಖಲೀಲ್ ಕುದ್ರೋಳಿ ಮತ್ತು ನರರೋಗ ತಜ್ಞ ಡಾ.  ಸಫ್ವಾನ್ ಉಪಸ್ಥಿತರಿದ್ದು, ನಮ್ಮ ನಾಡ ಒಕ್ಕೂಟದ ಧ್ಯೇಯ ಮತ್ತು ಯೋಜನೆಗಳ ಬಗ್ಗೆ ಮಾತನಾಡಿದರು.

ರಫೀಕ್ ಮಾಸ್ಟರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ನಮ್ಮ ನಾಡ ಒಕ್ಕೂಟವು ಕರಾವಳಿ ಕರ್ನಾಟಕದಲ್ಲಿ ಉತ್ತರ ಕನ್ನಡದ ಭಟ್ಕಳ ಸಹಿತ ಉಡುಪಿ ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಘಟಕವನ್ನು ರಚಿಸಿ ಕಾರ್ಯಾಚರಿಸುತ್ತಿದೆ. ಸಮುದಾಯದಲ್ಲಿ ಐಕ್ಯ, ಶೈಕ್ಷಣಿಕ ಸಬಲೀಕರಣ, ಆರೋಗ್ಯ ಸೇವೆ,  ಸೌಹಾರ್ದ ಸಮಾಜ ನಿರ್ಮಾಣ ಮತ್ತು ಉದ್ಯೋಗ ಅವಕಾಶಗಳ ಸೃಷ್ಟಿ ಮೊದಲಾದ ಗುರಿಗಳನ್ನಿಟ್ಟುಕೊಂಡು ನಮ್ಮ ನಾಡ ಒಕ್ಕೂಟ ಅಸ್ತಿತ್ವಕ್ಕೆ ಬಂದಿದ್ದು ವಿವಿಧ ತಾಲ್ಲೂಕಿನಲ್ಲಿ ಅನೇಕ ವಿಭಿನ್ನ ಕಾರ್ಯಕ್ರಮಗಳ ಮೂಲಕ ಸಮಾಜದ ಪ್ರಗತಿಗೆ ಪ್ರಯತ್ನಿಸುತ್ತಿದೆ ಎಂದು ಒಕ್ಕೂಟದ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News