ಕಾಂಚನ ಹೋಂಡಾ: ಹೊಸ ವರ್ಷದ ಸೇಲ್, ಬೃಹತ್ ಸಾಲ-ವಿನಿಮಯ ಮೇಳಕ್ಕೆ ಉತ್ತಮ ಸ್ಪಂದನೆ

Update: 2021-01-13 11:32 GMT

ಮಂಗಳೂರು : ಹೋಂಡಾ ವಾಹನ ಮಾರಾಟ ಹಾಗೂ ಸೇವೆಯಲ್ಲಿ ಕರಾವಳಿಯಾದ್ಯಂತ ಮುಂಚೂಣಿಯಲ್ಲಿರುವ ಹಾಗೂ ಹಲವು ವರ್ಷಗಳಿಂದ ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡುತ್ತಿರುವ ಕಾಂಚನ ಮೋಟಾರ್ಸ್‍ನ ಅಂಗ ಸಂಸ್ಥೆ ಕಾಂಚನ ಹೋಂಡಾವು ಆಯೋಜಿಸಿದ್ದ ಹೊಸ ವರ್ಷದ ಸೇಲ್, ಬೃಹತ್ ಸಾಲ ಹಾಗೂ ವಿನಿಮಯ ಮೇಳಕ್ಕೆ ಉತ್ತಮ ಜನ ಸ್ಪಂದನೆ ದೊರೆತಿದೆ.

ಈಗಾಗಲೇ ಈ ಮೇಳದಲ್ಲಿ 200ಕ್ಕೂ ಹೆಚ್ಚು ಗ್ರಾಹಕರು ತಮ್ಮ ಹಳೇ ದ್ವಿಚಕ್ರ ವಾಹನವನ್ನು ಹೋಂಡಾ ದ್ವಿಚಕ್ರ ವಾಹನದೊಂದಿಗೆ ವಿನಿಮಯಿಸಿರುತ್ತಾರೆ.

ಕಾಂಚನ ಹೋಂಡಾ ಸಂಸ್ಥೆಯು ಹೊಸ ವರ್ಷದ ಪ್ರಯುಕ್ತ ಗ್ರಾಹಕರಿಗೆ ಅತ್ಯಾಕರ್ಷಕ ಕೊಡುಗೆಯನ್ನು ನೀಡಿದ್ದರು. ಇದರ ಪ್ರಕಾರ ಗ್ರಾಹಕರು ಅತೀ ಕಡಿಮೆ ಡೌನ್ ಪೇಮೆಂಟ್ ರೂ. 6666ನ್ನು ಪಾವತಿಸಿ ತಮ್ಮ ನೆಚ್ಚಿನ ಹೋಂಡಾ ಸ್ಕೂಟರನ್ನು ಮನೆಗೆ ಒಯ್ಯಬಹುದು ಮಾತ್ರವಲ್ಲದೆ, ರೂ. 10000ದವರೆಗಿನ ಅತ್ಯಧಿಕ ಕೊಡುಗೆಯನ್ನು ತಮ್ಮದಾಗಿಸಬಹುದು.

ಗ್ರಾಹಕರಿಗೆ ವಿಶೇಷ ರಿಯಾಯತಿಯ ಬಡ್ಡಿದರ, ಅತೀ ಕಡಿಮೆ ದಾಖಲಾತಿಗಳೊಂದಿಗೆ ಸ್ಥಳದಲ್ಲೇ ಸಾಲ ಸೌಲಭ್ಯವನ್ನು ಕಲ್ಪಿಸಿ ಕೊಡಲಾಗಿತ್ತು. ಹೋಂಡಾ ದ್ವಿಚಕ್ರ ವಾಹನಗಳನ್ನು ಖರೀದಿಸಿದ ಎಲ್ಲಾ ಗ್ರಾಹಕರಿಗೆ ಖಚಿತವಾದ ಉಡುಗೊರೆಯಾಗಿ ಹೋಂಡಾ ಹೆಲ್ಮೆಟ್/ ಜೆಬಿಎಲ್ ಇನ್ಫಿನಿಟಿ ಸ್ಪೀಕರ್, ಹೋಂಡಾ ಟಿ-ಶರ್ಟ್ ನೀಡಲಾಗಿದೆ. ಈ ಮೇಲಿನ ಆಫರ್ ಗಳು ಇನ್ನು ಕೇವಲ 2 ದಿನಗಳ ಕಾಲ ಲಭ್ಯವಿದ್ದು ಗ್ರಾಹಕರು ಇದರ ಸದುಪಯೋಗ ಪಡೆಯಬಹುದು.

ಬಿ.ಸಿ. ರೋಡ್ ಹಾಗೂ ಸುತ್ತುಮುತ್ತಲಿನ ಜನತೆಯ ಅನುಕೂಲಕ್ಕಾಗಿ  ಸಂಸ್ಥೆಯು ತಮ್ಮ ಬಿ.ಸಿ. ರೋಡ್ ಶಾಖೆಯಲ್ಲಿ ಜ. 21 ರಿಂದ 23ರವರೆಗೆ ಬೃಹತ್ ಸಾಲ ಹಾಗೂ ವಿನಿಮಯ ಮೇಳವನ್ನು ಹಮ್ಮಿಕೊಳ್ಳಲಿದೆ.

ಗ್ರಾಹಕರು ಹೋಂಡಾ ದ್ವಿಚಕ್ರ ವಾಹನಗಳ ಆಫರ್ ಹಾಗೂ ಟೆಸ್ಟ್ ರೈಡ್‍ಗಾಗಿ ಇಂದೇ ಜಿಲ್ಲೆಯ ಮಂಗಳೂರು, ಕಾವೂರು, ತೊಕ್ಕೊಟ್ಟು, ಬಿ.ಸಿ. ರೋಡ್, ಸಿದ್ಧಕಟ್ಟೆ, ವಿಟ್ಲ ಹಾಗೂ ಮಾಣಿ ಶಾಖೆಗಳನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News