×
Ad

ವಿವೇಕಾನಂದರನ್ನು ಪೂಜಿಸದೆ ಅವರ ಆದರ್ಶಗಳನ್ನು ಪಾಲಿಸಿ: ಡಾ.ರಾಮದಾಸ ಪ್ರಭು

Update: 2021-01-13 17:39 IST

ಉಡುಪಿ, ಜ.13: ಸ್ವಾಮಿ ವಿವೇಕಾನಂದರ ತತ್ವ ಆದರ್ಶಗಳನ್ನು ಕೇವಲ ಪೂಜಿಸಿದರೆ ಸಾಲದು, ದೇಶದ ಯುವಜನತೆ ಅದನ್ನು ಪಾಲಿಸಬೇಕಾಗಿದೆ ಎಂದು ಉಡುಪಿ ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ.ರಾಮದಾಸ ಪ್ರಭು ಹೇಳಿದ್ದಾರೆ.

ಉಡುಪಿ ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಪ್ರಯುಕ್ತ ಜ.12ರಂದು ಆಯೋಜಿಸಲಾದ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಅವರು ಸ್ವಾಮಿವಿವೇಕಾನಂದದ ಚಿಂತನೆಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ವಿವೇಕಾನಂದರನ್ನು ದೈವತ್ವಕ್ಕೇರಿಸಿದಾಗ ನಮಗೆ ಅವರನ್ನು ಪೂಜಿಸುವುದು ಬಿಟ್ಟು ಬೇರೇನೂ ಕೆಲಸ ಇರುವುದಿಲ್ಲ. ಬದಲಾಗಿ ಅವರು ನಮ್ಮ ನಿಮ್ಮಂತೆ ಸಾಮಾನ್ಯ ಮಾನವರಾಗಿದ್ದು, ತನ್ನ ಸಾಧನೆಯಿಂದ ಆದರ್ಶ ಪುರುಷರಾದರೆಂದು ಗ್ರಹಿಸಿದರೆ ಜನ ಸಮಾನ್ಯರು ಅವರನ್ನು ಅನುಕರಿಸಿ ಬೆಳೆಯಬಹುದು ಎಂದರು.

ಮುಖ್ಯ ಅತಿಥಿಯಾಗಿ ಪ್ರೊ.ಶಿವಾನಂದ ನಾಯಕ್ ಪಿ. ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ಎಸ್. ವಹಿಸಿ ದ್ದರು. ಶೋಭಾ ಆರ್. ಸ್ವಾಗತಿಸಿದರು. ಡಾ.ರಾಜೇಂದ್ರ ಕೆ. ವಂದಿಸಿದರು. ಸುಚಿತ್ರಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News