ಕಥುವಾ ಜಿಲ್ಲೆಯ ಭಾರತ-ಪಾಕ್ ಗಡಿಯಲ್ಲಿ ಭೂಗತ ಸುರಂಗ ಪತ್ತೆ ಹಚ್ಚಿದ ಬಿಎಸ್‌ಎಫ್

Update: 2021-01-13 14:04 GMT

ಹೊಸದಿಲ್ಲಿ,ಜ.13: ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯ ಹಿರಾನಗರ ಸೆಕ್ಟರ್‌ನ ಬಾಬ್ಬಿಯಾನ್ ಗ್ರಾಮದಲ್ಲಿಯ ಭಾರತ-ಪಾಕ್ ಅಂತರರಾಷ್ಟ್ರೀಯ ಗಡಿಯಲ್ಲಿ ಮತ್ತೊಂದು ಭೂಗತ ಸುರಂಗವನ್ನು ಬಿಎಸ್‌ಎಫ್ ಸಿಬ್ಬಂದಿಗಳು ಬುಧವಾರ ಬೆಳಿಗ್ಗೆ ಪತ್ತೆ ಹಚ್ಚಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.

ಸುರಂಗವು ಪಾಕಿಸ್ತಾನದ ಭೂಪ್ರದೇಶದಿಂದ ಆರಂಭಗೊಂಡಿದ್ದು,ಭಯೋತ್ಪಾದಕರನ್ನು ಭಾರತದೊಳಗೆ ನುಸುಳಿಸಲು ಇದನ್ನು ನಿರ್ಮಿಸಲಾಗಿದೆ ಎಂದರು.

ಬಿಎಸ್‌ಎಫ್ ಐಜಿ ಎನ್.ಎಸ್.ಜಮವಾಲ್ ಮತ್ತು ಜಮ್ಮು ಐಜಿಪಿ ಮುಕೇಶ ಸಿಂಗ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ.

ನ.22ರಂದು ಸಾಂಬಾ ಸೆಕ್ಟರ್‌ನಲ್ಲಿ ಇಂತಹುದೇ ಭೂಗತ ಸುರಂಗವನ್ನು ಬಿಎಸ್‌ಎಫ್ ಪತ್ತೆ ಹಚ್ಚಿತ್ತು. ನ.19ರಂದು ನಗೋರಾ ಬಳಿಯ ಬಾನ್ ಟೋಲ್‌ಪ್ಲಾಝಾದಲ್ಲಿ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದ ನಾಲ್ವರು ಜೈಷ್ ಭಯೋತ್ಪಾದಕರು ಭಾರತದೊಳಗೆ ನುಸುಳಲು ಇದೇ ಸುರಂಗವನ್ನು ಬಳಸಿದ್ದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News