​ಜ. 16ರಿಂದ ಜಿಲ್ಲೆಯಲ್ಲಿ ಗ್ರಾಪಂಗಳ ಅಧ್ಯಕ್ಷ, ಉಪಾದ್ಯಕ್ಷರ ಮೀಸಲಾತಿ ನಿಗದಿ

Update: 2021-01-13 14:42 GMT

ಉಡುಪಿ, ಜ13: ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಉಡುಪಿ ಜಿಲ್ಲೆಯ ಏಳು ತಾಲೂಕುಗಳ ಚುನಾವಣೆ ನಡೆದಿರುವ ಎಲ್ಲಾ ಗ್ರಾಪಂಗಳಿಗೆ 30 ತಿಂಗಳ ಮೊದಲ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿಯನ್ನು ಜ.16ರಂದ ಆಯಾ ತಾಲೂಕುಗಳಲ್ಲಿ ನಿಗದಿ ಪಡಿಸಲಾಗುತ್ತದೆ.

ಮೀಸಲಾತಿ ನಿಗದಿ ಪಡಿಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಯಾ ತಾಲೂಕುಗಳ ಚುನಾಯಿತ ಗ್ರಾಪಂ ಸದಸ್ಯರು ನಿಗದಿತ ಕೇಂದ್ರಗಳಲ್ಲಿ ಸೂಚಿಸಿದ ದಿನ, ಸ್ಥಳ ಹಾಗೂ ಸಮಯಕ್ಕೆ ಸರಿಯಾಗಿ ಹಾಜರಿರುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಲೂಕುವಾರು ಗ್ರಾಪಂಗಳ ಅಧ್ಯಕ್ಷ/ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ನಿಗದಿಪಡಿಸುವ ದಿನ, ಸ್ಥಳ ಹಾಗೂ ಸಮಯ:
ಉಡುಪಿ ತಾಲೂಕು: ಒಟ್ಟು ಗ್ರಾಪಂ 16, ಮೀಸಲಾತಿ ದಿನ ನಿಗದಿ: ಜ.16 ಶನಿವಾರ. ಸ್ಥಳ: ಮಣಿಪಾಲ ರಜತಾದ್ರಿಯ ಅಟಲ್ ‌ಬಿಹಾರಿ ವಾಜಪೇಯಿ ಸಭಾಂಗಣ, ಸಮಯ: ಅಪರಾಹ್ನ 3:00ರಿಂದ.

ಬ್ರಹ್ಮಾವರ ತಾಲೂಕು: ಒಟ್ಟು ಗ್ರಾಪಂ 27, ಮೀಸಲಾತಿ ದಿನ ನಿಗದಿ: ಜ.18 ಸೋಮವಾರ, ಸ್ಥಳ:ಬಂಟರ ಭವನ ಬ್ರಹ್ಮಾವರ, ಸಮಯ: ಬೆಳಗ್ಗೆ 10:30ರಿಂದ.

ಕುಂದಾಪುರ ತಾಲೂಕು: ಒಟ್ಟು ಗ್ರಾಪಂ 45, ಮೀಸಲಾತಿ ದಿನ ನಿಗದಿ: ಜ.19 ಮಂಗಳವಾರ, ಸ್ಥಳ: ಯುವ ಮೆರೀಡಿಯನ್ ಕೋಟೇಶ್ವರ, ಸಮಯ: ಅಪರಾಹ್ನ 2 ರಿಂದ.

ಕಾಪು ತಾಲೂಕು: ಒಟ್ಟು ಗ್ರಾಪಂ 16, ಮೀಸಲಾತಿ ದಿನ ನಿಗದಿ: ಜ.21 ಗುರುವಾರ. ಸ್ಥಳ: ಶ್ರೀಮಹಾಲಕ್ಷ್ಮೀ ಸಭಾಭವನ, ಬಡಾಗ್ರಾಮ ಉಚ್ಚಿಲ, ಸಮಯ: ಬೆಳಗ್ಗೆ 11:30ರಿಂದ.

ಬೈಂದೂರು ತಾಲೂಕು: ಒಟ್ಟು ಗ್ರಾಪಂ 15, ಮೀಸಲಾತಿ ದಿನ ನಿಗದಿ: ಜ.21 ಗುರುವಾರ. ಸ್ಥಳ: ಜೆಎನ್‌ಆರ್ ಕಲಾಮಂದಿರ, ಯಡ್ತರೆ ಬೈಂದೂರು, ಸಮಯ: ಅಪರಾಹ್ನ 3:30ರಿಂದ.

ಕಾರ್ಕಳ ತಾಲೂಕು: ಒಟ್ಟು ಗ್ರಾಪಂ 27, ಮೀಸಲಾತಿ ದಿನ ನಿಗದಿ: ಜ.22 ಶುಕ್ರವಾರ, ಸ್ಥಳ: ಮಂಜುನಾಥ ಪೈ ಸಾಂಸ್ಕೃತಿಕ ಪ್ರತಿಷ್ಠಾನ ಕಾರ್ಕಳ, ಸಮಯ: ಬೆಳಗ್ಗೆ 10 ರಿಂದ.

ಹೆಬ್ರಿ ತಾಲೂಕು: ಒಟ್ಟು ಗ್ರಾಪಂ 9, ಮೀಸಲಾತಿ ದಿನ ನಿಗದಿ: ಜ.22 ಶುಕ್ರವಾರ, ಸ್ಥಳ: ಶ್ರೀಅನಂತ ಪದ್ಮನಾಭ ಸನ್ನಿಧಿ ಸಭಾಂಗಣ ಹೆಬ್ರಿ, ಸಮಯ: ಅಪರಾಹ್ನ 3 ರಿಂದ.

ಚುನಾಯಿತ ಗ್ರಾಪಂ ಸದಸ್ಯರ ಅವಗಾಹನೆಗಾಗಿ ಗ್ರಾಪಂವಾರು 1993ರಿಂದ 2015ರವರೆಗೆ ಅಧ್ಯಕ್ಷ/ಉಪಾಧ್ಯಕ್ಷ ಹುದ್ದೆಗೆ ನಿಗದಿ ಪಡಿಸಲಾದ ಮೀಸಲಾತಿಗಳ ಪಟ್ಟಿಯನ್ನು ತಯಾರಿಸಿ ಸಂಬಂಧಪಟ್ಟ ಗ್ರಾಪಂ ಕಚೇರಿಗಳಲ್ಲಿ ಪ್ರದರ್ಶಿಸಲಾಗಿದೆ ಎಂದೂ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News