ಎಸೆಸೆಲ್ಸಿ: ಜ.15ರಂದು ವಿಜ್ಞಾನ ವಿಷಯದ ಪೋನ್ ಇನ್ ಕಾರ್ಯಕ್ರಮ

Update: 2021-01-13 14:44 GMT

ಉಡುಪಿ, ಜ13: ಈ ಬಾರಿ ಎಸೆಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಶೈಕ್ಷಣಿಕ ಬಲವರ್ಧನೆಗಾಗಿ ವಿಜ್ಞಾನ ವಿಷಯದ ಕುರಿತು ಪೋನ್ ಇನ್ ಕಾರ್ಯಕ್ರಮ ಜ.15ರ ಶುಕ್ರವಾರ ಸಂಜೆ 5 ರಿಂದ ರಾತ್ರಿ 7 ರವರೆಗೆ ಉಡುಪಿಯ ಸರಕಾರಿ ಪ್ರೌ (ಬೋರ್ಡ್) ಶಾಲೆಯಲ್ಲಿ ನಡೆಯಲಿದೆ.

ಜಿಲ್ಲೆಯ ಎಸೆಸೆಲ್ಸಿ ಕಲಿಯುತ್ತಿರುವ ವಿದ್ಯಾರ್ಥಿಗಳು ವಿಜ್ಞಾನ ವಿಷಯದಲ್ಲಿ ಇರುವ ಕಲಿಕಾ ಸಮಸ್ಯೆಗಳಿಗೆ ಸಂಬಂಧಿಸಿದಂತೆ ದೀಪಾ ಹೆಜಮಾಡಿ ಮೊ. ಸಂಖ್ಯೆ: 8618240682, ರಜನಿ ಉಡುಪ ಮೊ.ಸಂಖ್ಯೆ:9880784064, ವಿನೋದ ಮೊ.ಸಂಖ್ಯೆ:9743577651, ನವ್ಯಾ ಮೊ.ಸಂಖ್ಯೆ: 9008417909, ನಾಗೇಂದ್ರ ಪೈ ಮೊ.ಸಂಖ್ಯೆ: 9886118891, ಮಿಲ್ಟನ ಕ್ರಾಸ್ಟಾ ಮೊ.ಸಂಖ್ಯೆ: 9481144081, ನಯನಾ ಮೊ.ಸಂಖ್ಯೆ: 9481842173, ಉಡುಪಿ ಬಿಇಓ ಮೊ.ಸಂಖ್ಯೆ: 9480695376 ಹಾಗೂ ಪರೀಕ್ಷಾ ಸಿದ್ಧತೆ, ಮತ್ತಿತರ ಪ್ರಶ್ನೆಗಳಿಗೆ ಡಿಡಿಪಿಐ ಮೊ.ನಂ:9448999353ಕ್ಕೆ ಕರೆ ಮಾಡಿ ಪ್ರಶ್ನೆಗಳನ್ನು ಕೇಳಿ ಪರಿಹಾರ ಪಡೆಯಬಹುದು.

ಪಾಲಕರೂ, ಸಾರ್ವಜನಿಕರೂ ಸಹ ಕರೆ ಮಾಡಿ ಪರೀಕ್ಷಾ ಸಿದ್ಧತೆ ಮತ್ತಿತರ ಶೈಕ್ಷಣಿಕ ಸಮಸ್ಯೆಗಳಿಗೆ ಡಿಡಿಪಿಐ ನಂಬರ್‌ಗೆ ಕರೆ ಮಾಡಬಹುದು. ಈ ವಾರದ ಪೋನ್ ಇನ್ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಡಾ.ನವೀನ್ ಭಟ್ ಆಗಮಿಸಿ, ಮಕ್ಕಳ ಕರೆಗಳನ್ನು ಸ್ವೀಕರಿಸಿ, ಮಕ್ಕಳಿಗೆ ಉತ್ತಮ ಕಲಿಕೆಗೆ ಉತ್ತಮ ಸಲಹೆಗಳನ್ನು ನೀಡಲಿದ್ದಾರೆ.

ಕಾರ್ಯಕ್ರಮದ ಸಂಯೋಜಕರಾದ ಡಿಡಿಪಿಐ ಎನ್.ಹೆಚ್.ನಾಗೂರ ಮತ್ತು ಉಡುಪಿ ಬಿಇಓ ಮಂಜುಳಾ ಫೋನ್ ಇನ್ ಕಾರ್ಯಕ್ರಮದಲ್ಲಿ ಉಪಸ್ಥಿತ ರಿರುವರು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News