ಪರ್ಕಳ ಮುಖ್ಯರಸ್ತೆ ಅಗಲೀಕರಣ: ಭೂ ಮಾಲಕರು, ಅಧಿಕಾರಿಗಳೊಂದಿಗೆ ಶಾಸಕರ ಸಭೆ

Update: 2021-01-13 15:32 GMT

ಉಡುಪಿ, ಜ.13: ಉಡುಪಿ- ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಪರ್ಕಳ ಪೇಟೆ ಭಾಗದಲ್ಲಿ ರಸ್ತೆ ಅಗಲೀಕರಣಗೊಳಿಸುವ ನಿಟ್ಟಿ ನಲ್ಲಿ ಭೂಸ್ವಾಧೀನಕ್ಕೆ 3ಎ ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಹಾಗೂ ಭೂಮಾಲಕರೊಂದಿಗೆ ಇಂದು ಶಾಸಕ ಕೆ.ರಘುಪತಿ ಭಟ್ ಸಭೆ ನಡೆಸಿದರು.

ಭೂಮಾಲಕರಿಗೆ ಭೂಸ್ವಾಧೀನದ ಬಗ್ಗೆ ಗೊಂದಲ ಇರುವ ಕಾರಣಕ್ಕೆ ಅಧಿ ಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಜಾಗದ ಸರ್ವೆ ನಡೆಸಿ ಗಡಿ ಗುರುತಿಸಿದ ಶಾಸಕರು, ಬಳಿಕ ಪರ್ಕಳದ ಗಣೇಶ್ ಕಲಾಮಂದಿರದಲ್ಲಿ ಸಭೆ ನಡೆಸಿದರು. ಭೂ ಮಾಲಕರಿಗೆ ನೀಡಲಾ ಗುವ ಪರಿಹಾರದ ಬಗ್ಗೆ ಚರ್ಚಿಸಿ ಜ.27ರೊಳಗೆ ಇನ್ನೊಂದು ಸಭೆ ನಡೆಸಲು ತೀರ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಸುಮಿತ್ರಾ ಆರ್.ನಾಯಕ್, ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್, ರಾಷ್ಟ್ರೀಯ ಹೆದ್ದಾರಿ ಸಹಾಯಕ ಅಭಿ ಯಂತರ ಮಂಜುನಾಥ್ ನಾಯಕ್, ಮಣಿಪಾಲ ಪೊಲೀಸ್ ನಿರೀಕ್ಷಕ ಮಂಜು ನಾಥ್ ಎಂ., ಕಂದಾಯ ನಿರೀಕ್ಷಕ ಉಪೇಂದ್ರ, ವಿಶೇಷ ಭೂಸ್ವಾಧೀನ ಅಧಿಕಾರಿ ಗಳು, ಭೂ ಮಾಪನಾಧಿಕಾಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News