ಅಂಗನವಾಡಿ ಹುದ್ದೆಗೆ ಅರ್ಜಿ ಆಹ್ವಾನ

Update: 2021-01-13 15:59 GMT

ಮಂಗಳೂರು, ಜ.13: ಮಂಗಳೂರು ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಐಕಳ ಗ್ರಾಪಂನ ಏಳಿಂಜೆ ಅಂಗನವಾಡಿ ಕೇಂದ್ರ, ಪಾವೂರು ಗ್ರಾಪಂನ ಪೋಡಾರ್ ಸೈಟ್ ಅಂಗನವಾಡಿ ಕೇಂದ್ರ, ಉಳ್ಳಾಲ ನಗರಸಭೆ, ವಾರ್ಡ್ ನಂ.17ರ ಕಲ್ಲಾಪು ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆ ಹುದ್ದೆ ಖಾಲಿ ಇದೆ.

ಪಡುಮಾರ್ನಾಡು ಗ್ರಾಪಂನ ಮುಗೇರಕಳ ಅಂಗನವಾಡಿ ಕೇಂದ್ರ, ಚೇಳ್ಯಾರು ಗ್ರಾಪಂನ ಚೇಳ್ಯಾರುಪದವು ಅಂಗನವಾಡಿ ಕೇಂದ್ರ, ಮೂಡುಶೆಡ್ಡೆ ಎದುರುಪದವು ಅಂಗನವಾಡಿ ಕೇಂದ್ರ, ಮುಲ್ಕಿ ನಗರ ಪಂಚಾಯತ್ ವಾರ್ಡ್ ನಂ.17ರ ಚಿತ್ರಾಪು ಅಂಗನವಾಡಿ ಕೇಂದ್ರ, ಪಾವೂರು ಗ್ರಾಪಂನ ಬದ್ರಿಯಾನಗರ ಅಂಗನವಾಡಿ ಕೇಂದ್ರ, ಹರೇಕಳ ಗ್ರಾಪಂನ ಖಂಡಿಗೆ ಮೂಲೆ ಅಂಗನವಾಡಿ ಕೇಂದ್ರ, ಕೋಣಾಜೆ ಗ್ರಾಪಂನ ಕೋಣಾಜೆ ಅಂಗನವಾಡಿ ಕೇಂದ್ರ, ಕೆಮ್ರಾಲ್ ಗ್ರಾಪಂನ ಹೊಸಕಾಡು ಅಂಗನ ವಾಡಿ ಕೇಂದ್ರ, ಬಜ್ಪೆ ಗ್ರಾಪಂನ ಕೊಂಚಾರು ಅಂಗನವಾಡಿ ಕೇಂದ್ರ, ಅಂಬ್ಲಮೊಗರು ಗ್ರಾಪಂನ ಗಾಂಧಿನಗರ ಅಂಗನವಾಡಿ ಕೇಂದ್ರ, ತೆಂಕಮಿಜಾರು ಗ್ರಾಪಂನ ತೆಂಕಮಿಜಾರು ಅಂಗನವಾಡಿ ಕೇಂದ್ರ, ಜೋಕಟ್ಟೆ ಗ್ರಾಪಂನ ಜೋಕಟ್ಟೆ-3 ಅಂಗನವಾಡಿ ಕೇಂದ್ರ, ಮೂಡುಬಿದಿರೆ ಪುರಸಭೆ, ವಾ.ನಂ.6ರ ಜೈನ್‌ಪೇಟೆ ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿ ಹುದ್ದೆ ಖಾಲಿ ಇದೆ.
ಅರ್ಹರು ವೆಬ್‌ಸೈಟ್ www.anganwadirecruit.kar.nic.inನಲ್ಲಿ ಫೆ.6ರೊಳಗೆ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ, ಸ್ವೀಕಾರ ಕೇಂದ್ರ ಕಟ್ಟಡ, ವಾಮಂಜೂರು- 575028. ದೂ.ಸಂ.: 0824-2263199ನ್ನು ಸಂಪರ್ಕಿಸಬಹುದು ಎಂದು ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News