ಕೊಳವೆಬಾವಿ ಕೊರೆಯುವ ‘7ಒ’ ಕಡ್ಡಾಯ

Update: 2021-01-13 16:01 GMT

ಮಂಗಳೂರು, ಜ.13: ಕರ್ನಾಟಕ ಅಂತರ್ಜಲ ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಮಯ ಹಾಗೂ ನಿಯಂತ್ರಣ ಅನ್ವಯ ಕೊಳವೆ ಬಾವಿ ಕೊರೆಯುವ ರಿಗ್ ಯಂತ್ರದ ಮಾಲಕರು ಕರ್ನಾಟಕ ಅಂತರ್ಜಲ ಪ್ರಾಧಿಕಾರದಿಂದ ನೋಂದಣಿ ‘7ಒ’ ಹೊಂದುವುದನ್ನು ಕಡ್ಡಾಯಗೊಳಿಸಲಾಗಿದೆ.

ಕೊಳವೆಬಾವಿ ಕೊರೆಸುವವರು (ಸರಕಾರಿ/ಖಾಸಗಿ) ಕರ್ನಾಟಕ ಅಂತರ್ಜಲ ಪ್ರಾಧಿಕಾರದಿಂದ ‘7ಒ’ ಹೊಂದಿರುವ ರಿಗ್ ಯಂತ್ರದ ಬಗ್ಗೆ ಖಾತ್ರಿ ಪಡಿಸಿಕೊಂಡು ಕೊಳವೆಬಾವಿ ಕೊರೆಸಬೇಕು. ತಪ್ಪಿದ್ದಲ್ಲಿ ಇಲಾಖಾ ನಿಯಾಮಾನುಸಾರ ಕ್ರಮ ಜರಗಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಹಿರಿಯ ಭೂವಿಜ್ಞಾನಿ, ಜಿಲ್ಲಾ ಅಂತರ್ಜಲ ಕಚೇರಿ, ಅಂತರ್ಜಲ ನಿರ್ದೇಶನಾಲಯ, ಜಿಪಂ ಕಟ್ಟಡ ಅಶೋಕ ನಗರ, ಮಂಗಳೂರು ಅವರನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News