ಜ.17ರಂದು ಉಜಿರೆಯಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ

Update: 2021-01-13 16:11 GMT

ಬೆಳ್ತಂಗಡಿ : ‘ಕಪುಚಿನ್ ಕೃಷಿಕ್ ಸೇವಾ ಕೇಂದ್ರ ವಿಮುಕ್ತಿ, ಸಂತ ಅಂತೋನಿ ಚರ್ಚ್ ಉಜಿರೆ, ಯಂಗ್ ಚಾಲೆಂಜರ್ಸ್ ಸ್ಪೋಟ್ಸ್ ಕ್ಲಬ್ ಮುಂಡಾಜೆ ಇವರ ಸಹಯೋಗದೊಂದಿಗೆ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆ ಸಹಕಾರದೊಂದಿಗೆ ಶತಕ ದಾನಿಗಳಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಜ. 17ರಂದು ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯ ಲಿದೆ’ ಎಂದು ವಿಮುಕ್ತಿ ಸಂಸ್ಥೆಯ ನಿರ್ದೇಶಕ ಫಾ. ವಿನೋದ್ ಮಸ್ಕರೇನಸ್ ಹೇಳಿದರು.

ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬನ್ನಿ ಆರೋಗ್ಯವಂತ ಸಮಾಜಕ್ಕೋಸ್ಕರ ರಕ್ತದಾನವನ್ನು ಹವ್ಯಾಸವಾಗಿ ಮಾಡೋಣ ಎಂಬ ಧ್ಯೇಯ ವಾಕ್ಯದಡಿ ಈ ರಕ್ತದಾನ ಶಿಬಿರ ನಡೆಯಲಿದ್ದು, ಈಗಾಗಲೇ 100 ಜನ ದಾನಿಗಳು ರಕ್ತದಾನ ಮಾಡಲು ಮುಂದೆ ಬಂದಿದ್ದಾರೆ. ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ರಕ್ತದಾನ ನಡೆಯಲಿದ್ದು ಉದ್ಘಾಟನಾ ಸಮಾರಂಭದಲ್ಲಿ  ವಿಮುಕ್ತಿ ಸಂಸ್ಥೆಯ ನಿರ್ದೇಶಕ ಫಾ. ವಿನೋದ್ ಮಸ್ಕರೇನಸ್, ಉಜಿರೆ ಸಂತ ಅಂತೋನಿ ಚರ್ಚ್‍ನ ಫಾ. ಜೇಮ್ಸ್, ಮುಂಡಾಜೆ ಯಂಗ್ ಚಾಲೆಂಜರ್ಸ್‍ನ ಸಂಚಾಲಕ ನಾಮದೇವ್ ರಾವ್ ಮುಂಡಾಜೆ ಪಾಲ್ಗೊಳ್ಳಲಿದ್ದಾರೆ’ ಎಂದರು.

‘ರಕ್ತದಾನ ಮಾಡುವ ಸಾರ್ವಜನಿಕರಿಗೆ ಮುಕ್ತ ಅವಕಾಶವಿದ್ದು ವೈಯಕ್ತಿಕ ಅಂತರದೊಂದಿಗೆ ಮಾಸ್ಕ್ ಕಡ್ಡಾಯವಾಗಿ ಧರಿಸಿ ಕೊಳ್ಳಬೇಕು. ಜ್ವರ, ಕೆಮ್ಮು, ಉಸಿರಾಟ ತೊದರೆಯ ಲಕ್ಷಣಗಳು ಇದ್ದಲ್ಲಿ ರಕ್ತದಾನ ಕೊಠಡಿಗೆ ಹೋಗುವುದನ್ನು ನಿಷೇಧಿಸ ಲಾಗಿದೆ’ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಮುಕ್ತಿ ಸಂಸ್ಥೆಯ ಸಹ ನಿರ್ದೇಶಕ ಫಾ. ರೋಹನ್ ಲೋಬೋ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News