ಪರ್ಯಾಯಶ್ರೀಗಳಿಂದ ಉಡುಪಿ ಕೃಷ್ಣನಿಗೆ ‘ಸುವರ್ಣ ಛತ್ರ’ ಸಮರ್ಪಣೆ

Update: 2021-01-14 14:59 GMT

ಉಡುಪಿ, ಜ.14: ನೂತನವಾಗಿ ನಿರ್ಮಿಸಲಾದ ‘ಸುವರ್ಣ ಛತ್ರ’ವನ್ನು ಮಕರ ಸಂಕ್ರಮಣದ ಶುಭ ಸಂದರ್ಭದಲ್ಲಿ ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಅವರು ಅಷ್ಟಮಠಾಧೀಶರ ಸಮಕ್ಷಮದಲ್ಲಿ ಗುರುವಾರ ಬೆಳಗ್ಗೆ ಉಡುಪಿ ಶ್ರೀಕೃಷ್ಣನಿಗೆ ಸಮರ್ಪಿಸಿದರು.

ಸುಮಾರು 50 ಲಕ್ಷ ರೂ.ವೆಚ್ಚದಲ್ಲಿ 2.5ಕೆ.ಜಿ. ಚಿನ್ನದಿಂದ ನಿರ್ಮಿಸಿರುವ ಈ ಸುವರ್ಣ ಛತ್ರ, ಆಕರ್ಷಕ ಕುಸುರಿಕಲೆಯೊಂದಿಗೆ ಮನಸೆಳೆಯುವಂತಿದೆ. ಪಾಜಕದ ಶಿಲ್ಪಿ ರಾಘವೇಂದ್ರಾಚಾರ್ಯ ಕುಂಜಾರುಗಿರಿ ಇವರು ಉಡುಪಿಯ ಸಂತೋಷ್ ಶೇಟ್ ಇವರ ಉಸ್ತುವಾರಿಯಲ್ಲಿ ಈ ಸುವರ್ಣ ಛತ್ರವನ್ನು ನಿರ್ಮಿಸಿದ್ದಾರೆ.

ಈ ಸಂದರ್ಭದಲ್ಲಿ ಅದಮಾರು ಮಠದ ಹಿರಿಯ ಯತಿಗಳಾದ ಶ್ರೀವಿಶ್ವಪ್ರಿಯ ತೀರ್ಥರು, ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥರು, ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥರು ಹಾಗೂ ಶ್ರೀವಿದ್ಯಾರಾಜೇಶ್ವರ ತೀರ್ಥರು, ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರು, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥರು, ಸೋದೆ ಮಠದ ಶ್ರೀವಿಶ್ವ ಲ್ಲಭ ತೀರ್ಥರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News