ಜಬಲ್‌ಪುರ -ಕೊಯಮತ್ತೂರು ಸಾಪ್ತಾಹಿಕ ರೈಲಿನ ಅವಧಿ ವಿಸ್ತರಣೆ

Update: 2021-01-14 15:02 GMT

ಉಡುಪಿ, ಜ.14: ಜಬಲ್‌ಪುರ ಜಂಕ್ಷನ್ ಹಾಗೂ ಕೊಯಮತ್ತೂರು ಜಂಕ್ಷನ್ ನಡುವೆ ಓಡಾಡುವ ಸಾಪ್ತಾಹಿಕ ಸೂಪರ್‌ಫಾಸ್ಟ್ ಹಬ್ಬದ ವಿಶೇಷ ರೈಲಿನ ಓಡಾಟದ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ರೈಲು ನಂ. 02198 ಜಬಲ್‌ಪುರ ಜಂಕ್ಷನ್-ಕೊಯಮತ್ತೂರು ಜಂಕ್ಷನ್ ಸಾಪ್ತಾಹಿಕ ಸೂಪರ್‌ಫಾಸ್ಟ್ ರೈಲು ಜ.16ರಿಂದ ಮಾ.27ರವರೆಗೆ ಪ್ರತಿ ಶನಿವಾರ ಬೆಳಗ್ಗೆ 11 ಗಂಟೆಗೆ ಜಬಲ್‌ಪುರದಿಂದ ಹೊರಟು ಮೂರನೇ ದಿನ ಬೆಳಗಿನ ಜಾವ 2:50ಕ್ಕೆ ಕೊಯಮತ್ತೂರು ಜಂಕ್ಷನ್ ತಲುಪಲಿದೆ.

ಅದೇ ರೀತಿ ರೈಲು ನಂ. 02197 ಕೊಯಮತ್ತೂರು ಜಂಕ್ಷನ್- ಜಬಲ್‌ಪುರ ಜಂಕ್ಷನ್ ಸಾಪ್ತಾಹಿಕ ಸೂಪರ್‌ಫಾಸ್ಟ್ ರೈಲು ಜ.18ರಿಂದ ಮಾ.29ರವರೆಗೆ ಪ್ರತಿ ಸೋಮವಾರ ಸಂಜೆ 6:00ಗಂಟೆಗೆ ಕೊಯಮತ್ತೂರಿನಿಂದ ಹೊರಟು, ಮೂರನೇ ದಿನ ಬೆಳಗ್ಗೆ 8 ಗಂಟೆಗೆ ಜಬಲ್‌ಪುರ ಜಂಕ್ಷನ್ ತಲುಪಲಿದೆ.

ಈ ರೈಲಿಗೆ ರಾಜ್ಯದಲ್ಲಿ ಕಾರವಾರ, ಕುಮಟಾ, ಮುಕಾಂಬಿಕಾ ರೋಡ್ ಬೈಂದೂರು, ಕುಂದಾಪುರ, ಉಡುಪಿ,ಮುಲ್ಕಿ, ಮಂಗಳೂರು ಜಂಕ್ಷನ್, ಕಾಸರಗೋಡು, ಕಾಂಞಂಗಾಡ್, ಪಯ್ಯನೂರು ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ. ಈ ರೈಲು ಒಟ್ಟು 17 ಕೋಚ್‌ಗಳನ್ನು ಹೊಂದಿರುತ್ತದೆ. ಇವುಗಳಲ್ಲಿ 2 ಟಯರ್ ಎಸಿ-1ಕೋಚ್, ತ್ರಿ ಟಯರ್ ಎಸಿ-5ಕೋಚ್, ಸ್ಲೀಪರ್-9 ಕೋಚ್ ಹಾಗೂ ಎಸ್‌ಎಲ್‌ಆರ್-2 ಕೋಚ್‌ಗಳು ಇರುತ್ತವೆ ಎಂದು ಕೊಂಕಣ ರೈಲ್ವೆಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News