​ಮರಳು ಅಕ್ರಮ ಸಾಗಾಟ ಆರೋಪ : 2 ಲಾರಿ ವಶ

Update: 2021-01-14 16:10 GMT

ಮಂಗಳೂರು, ಜ.14: ಪರವಾನಿಗೆ ರಹಿತ ಮರಳು ಅಕ್ರಮ ಸಾಗಾಟ ಆರೋಪದಲ್ಲಿ ಎರಡು ಲಾರಿಗಳನ್ನು ಕಂಕನಾಡಿ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆಡಂಕುದ್ರು ನೇತ್ರಾವತಿ ನದಿ ತಟದಲ್ಲಿರುವ ಮರಳು ಧಕ್ಕೆಯಿಂದ ಮರಳನ್ನು ಆಡಂಕುದ್ರು ನೇತ್ರಾವತಿ ನದಿ ತಟದಲ್ಲಿರುವ ಮರಳು ಧಕ್ಕೆಯಿಂದ ಅಕ್ರಮವಾಗಿ ಮರಳನ್ನು ಕಳ್ಳತನ ಮಾಡಿ ಲಾರಿಯಲ್ಲಿ ಸಾಗಾಟ ಮಾಡುತ್ತಿರುವುದಾಗಿ ಮಾಹಿತಿ ಬಂದಂತೆ ತೆಗೆದು ಲಾರಿಯಲ್ಲಿ ಸಾಗಾಟ ಮಾಡುತ್ತಿರುವುದಾಗಿ ಮಾಹಿತಿ ಬಂದಂತೆ ಬುಧವಾರ ಪೊಲೀಸರು ದಾಳಿ ನಡೆಸಿದರು. ಮಧ್ಯಾಹ್ನ 1:30ರ ಸುಮಾರಿಗೆ ಆಡಂಕುದ್ರು ಕ್ರಾಸ್ ಬಳಿ ಮರಳು ತುಂಬಿದ ಲಾರಿ ಚಾಲಕ ಕಿಶೋರ್‌ಕುಮಾರ್ ಯಾವುದೇ ಪರವಾನಿಗೆ ಹೊಂದಿರಲಿಲ್ಲ. ಈ ವಾಹನವನ್ನು ಕೋಟೆಕಾರು ಬೀರಿಗೆ ಸಾಗಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೊಂದು ಲಾರಿಯಲ್ಲಿ ಅಕ್ರಮ ಮರಳು ತುಂಬಿಸಿ ಸಮೀಪದ ಮನೆಯ ಬಳಿ ಅನ್‌ಲೋಡ್ ಮಾಡುತ್ತಿದ್ದರು. ಈ ಮರಳನ್ನು ಸುನೀಲ್ ಎಂಬವರೊಂದಿಗೆ ಸೇರಿ ಮರಳು ಧಕ್ಕೆಯಿಂದ ಪರವಾನಿಗೆ ರಹಿತವಾಗಿ ಲಾರಿಗೆ ಲೋಡ್ ಮಾಡಿದ್ದರು. ಸುಮಾರು 4,000 ರೂ. ಮೌಲ್ಯದ ಮರಳು ಹಾಗೂ 2 ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಕುರಿತು ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News