ಗೂಡ್ಸ್‌ಶೆಡ್‌ನಲ್ಲಿ ಅಮೋನಿಯಂ ಸೋರಿಕೆ

Update: 2021-01-14 16:25 GMT

ಮಂಗಳೂರು, ಜ.14: ನಗರದ ಗೂಡ್ಸ್‌ಶೆಡ್‌ನಲ್ಲಿ ಬಂದ್ ಆಗಿದ್ದ ಐಸ್‌ಪ್ಲಾಂಟ್‌ನಲ್ಲಿ ಗುರುವಾರ ಸಂಜೆ ಅಮೋನಿಯಂ ಸೋರಿಕೆಯಾಗಿದ್ದು, ಪಾಂಡೇಶ್ವರ ಅಗ್ನಿಶಾಮಕದಳ ಕಾರ್ಯಾಚರಣೆ ನಡೆಸಿದರು.

ಐಸ್‌ಪ್ಲಾಂಟ್ ಕಾರ್ಯಾಚರಣೆ ಸ್ಥಗಿತಗೊಂಡಿದ್ದು, ಅದರ ಸಾಮಗ್ರಿಗಳನ್ನು ತೆಗೆಯಲು ಗುಜರಿ ಅಂಗಡಿಯವರಿಗೆ ನೀಡಿದ್ದರು. ಅದರೊಳಗಿದ್ದ ಪೈಪ್‌ಗಳನ್ನು ತುಂಡರಿಸುವ ವೇಳೆ ಅಮೋನಿಯಂ ಸೋರಿಕೆಯಾಗಿದೆ. ತಕ್ಷಣ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದು, ಅವರು ಆಗಮಿಸಿ ಕಾರ್ಯಾಚರಣೆ ನಡೆಸಿ ಸೋರಿಕೆ ತಡೆಗಟ್ಟಿ ಸ್ಥಳೀಯರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಂಡರು ಎಂದು ತಿಳಿದುಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News