ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್‌ನ ವಾರ್ಷಿಕ ಮಹಾಸಭೆ

Update: 2021-01-14 16:35 GMT

ಸುರತ್ಕಲ್, ಜ.14: ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್‌ನ ವಾರ್ಷಿಕ ಮಹಾಸಭೆಯು ಡಿವಿಷನ್ ಅಧ್ಯಕ್ಷ ಉಮರುಲ್ ಫಾರೂಕ್ ಸಖಾಫಿ ಕಾಟಿಪಳ್ಳ ಅವರ ಅಧ್ಯಕ್ಷತೆಯಲ್ಲಿ ಕಾಟಿಪಳ್ಳ ಮಿಸ್ಬಾಹ್ ಕಾಲೇಜ್‌ನ ಸಭಾಂಗಣದಲ್ಲಿ ಬುಧವಾರ ನಡೆಯಿತು.

ಎಸ್ಸೆಸ್ಸೆಫ್ ದ.ಕ. ಜಿಲ್ಲಾ ವೆಸ್ಟ್ ಝೋನ್ ಅಧ್ಯಕ್ಷ ಮುನೀರ್ ಸಖಾಫಿ ಉಳ್ಳಾಲ ಸಭೆಯನ್ನು ಉದ್ಘಾಟಿಸಿದರು. ಡಿವಿಷನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತನ್ಸೀರ್ ವಾರ್ಷಿಕ ವರದಿ ಹಾಗೂ ಕೋಶಾಧಿಕಾರಿ ಆಸೀಫ್ ಪಕ್ಷಿಕೆರೆ ಲೆಕ್ಕಪತ್ರ ಮಂಡಿಸಿದರು.

ಸಭೆಯ ವೀಕ್ಷಕರಾಗಿ ದ.ಕ. ವೆಸ್ಟ್ ಝೋನ್ ನಾಯಕ ಇಬ್ರಾಹೀಂ ಅಹ್ಸನಿ ಮಂಜನಾಡಿ, ನವಾಝ್ ಸಖಾಫಿ ಅಡ್ಯಾರ್ ಪದವು, ಝಹೈರ್ ಮಾಸ್ಟರ್ ಬಜ್ಪೆ, ಸಿದ್ದೀಕ್ ಬಜ್ಪೆ, ಇಲ್ಯಾಸ್ ಪೊಟ್ಟಲಿಕೆ, ಶರೀಫ್ ಮುಡಿಪು, ಇಕ್ಬಾಲ್ ಮಧ್ಯನಡ್ಕ ಭಾಗವಹಿಸಿದ್ದರು.

2021ನೆ ಸಾಲಿನ ನೂತನ ಸಮಿತಿಯ ಅಧ್ಯಕ್ಷರಾಗಿ ಹನೀಫ್ ಅಹ್ಸನಿ ಶೇಡಿಗುರಿ, ಉಪಾಧ್ಯಕ್ಷರಾಗಿ ಸಿನಾನ್ ಸಖಾಫಿ 3ನೇ ಬ್ಲಾಕ್ ಮತ್ತು ಆಸೀಫ್ ಪಕ್ಷಿಕೆರೆ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ತನ್ಸೀರ್ 4ನೇ ಬ್ಲಾಕ್, ಕೋಶಾಧಿಕಾರಿ ತೌಸೀಫ್ ಬದ್ರಿಯಾನಗರ, ಕಾರ್ಯದರ್ಶಿಗಳಾಗಿ ಅನ್ಸಾರ್ 9ನೇ ಬ್ಲಾಕ್, ಇಲ್ಯಾಸ್ ಜಂಕ್ಷನ್, ಹನೀಫ್ ಸುರತ್ಕಲ್, ಇರ್ಷಾದ್ ಪಕ್ಷಿಕೆರೆ, ನುಅ್ಮಾನ್ ಇಸ್ಮಾಯಿಲ್ 6ನೇ ಬ್ಲಾಕ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಉಮರುಲ್ ಫಾರೂಕ್ ಸಖಾಫಿ ಕಾಟಿಪಳ್ಳ, ಆರೀಫ್ ಝುಹುರಿ ಮುಕ್ಕ, ನಝರ್ 9ನೇ ಬ್ಲಾಕ್, ಅಫ್ವಾನ್ ಸೂರಿಂಜೆ, ಅಫ್ರೀದ್ ಜಂಕ್ಷನ್, ಮಝರ್ ಕುಕ್ಕಾಡಿ, ಶಂಶುದ್ದೀನ್ ಅಹ್ಸನಿ ಬಳ್ಕುಂಜೆ, ರಾಹಿಲ್ ಪಕ್ಷಿಕೆರೆ, ಅಬ್ದುರ್ರವೂಫ್ ಹಿಮಮಿ ಸಖಾಫಿ ಹಳೆಯಂಗಡಿ, ಅಲಿ ಸಅದಿ ಜೊಕಟ್ಪೆ, ರಫೀಕ್ 3ನೇ ಬ್ಲಾಕ್, ಸಿದ್ದೀಕ್ 3ನೇ ಬ್ಲಾಕ್, ಇರ್ಷಾದ್ 3ನೇ ಬ್ಲಾಕ್ , ಹಾರಿಸ್ ಕಾನ ಇವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಅಶ್ರಫ್ ರಝಾ ಅಂಜದಿ ಪಕ್ಷಿಕೆರೆ, ಎಸ್‌ವೈಎಸ್ ಕೃಷ್ಣಾಪುರ ಸೆಂಟರ್ ಅಧ್ಯಕ್ಷ ಹಬೀಬುರ್ರಹ್ಮಾನ್ ಸಖಾಫಿ ಕಾಟಿಪಳ್ಳ, ಎಸ್‌ವೈಎಸ್ ಸುರತ್ಕಲ್ ಸೆಂಟರ್ ಅಧ್ಯಕ್ಷ ಅಬ್ದುಲ್ಲತೀಫ್ ಸಖಾಫಿ ಕಿನ್ನಿಗೋಳಿ, ಮಾಜಿ ರಾಜ್ಯ ಎಸ್ಸೆಸ್ಸೆಫ್ ಕಾರ್ಯದರ್ಶಿ ಹಾಜಿ ಅಬ್ದುರ್ರಹ್ಮಾನ್ ಕೃಷ್ಣಾಪುರ, ದ.ಕ. ಜಿಲ್ಲಾ ಮಾಜಿ ಕ್ಯಾಂಪಸ್ ಕಾರ್ಯದರ್ಶಿ ಆಸೀಫ್ ಹಾಜಿ ಕೃಷ್ಣಾಪುರ, ದ.ಕ. ಜಿಲ್ಲಾ ಸದಸ್ಯರಾದ ಆರೀಫ್ ಝುಹುರಿ ಮುಕ್ಕ, ದ.ಕ. ಜಿಲ್ಲಾ ಕಾರ್ಯದರ್ಶಿ ರಫೀಕ್ 3ನೇ ಬ್ಲಾಕ್, ಕೆಸಿಎಫ್ ನಾಯಕರಾದ ಫಾರೂಕ್ ಕಾಟಿಪಳ್ಳ ಹಾಗೂ ಸ್ವಾದಿಕ್ ಕಾಟಿಪಳ್ಳ, ಡಿವಿಷನ್ ಮಾಜಿ ನಾಯಕಗಳಾದ ಹೈದರ್ ಮದನಿ ಕೋಟೆ, ಫಾರೂಕ್ ಶೇಡಿಗುರಿ, ಇಕ್ಬಾಲ್ ಅಡ್ಕ, ತಮೀಮ್ ಕೃಷ್ಣಾಪುರ, ಮೂಸ ಕೃಷ್ಣಾಪುರ, ಬಶೀರ್ ಕಾನ ಉಪಸ್ಥಿತರಿದ್ದರು.

ಡಿವಿಷನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತನ್ಸೀರ್ 4ನೇ ಬ್ಲಾಕ್ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News