ಗಾಳಿಪಟ ಹಾರಿಸುವಾಗ ಸಗಣಿ ಹೊಂಡಕ್ಕೆ ಬಿದ್ದು ಮೃತಪಟ್ಟ ಬಾಲಕ

Update: 2021-01-15 05:49 GMT

 ಮುಂಬೈ: ಆಘಾತಕಾರಿ ಘಟನೆಯೊಂದರಲ್ಲಿ ಗಾಳಿಪಟ ಹಾರಿಸುತ್ತಿದ್ದ 10 ವರ್ಷದ ಬಾಲಕನೊಬ್ಬ ಸಗಣಿ ಹೊಂಡಕ್ಕೆ ಬಿದ್ದು ಮೃತಪಟ್ಟಿರುವ ಘಟನೆ ಮುಂಬೈನ ಕಾಂದಿವಲಿ ಪ್ರದೇಶದಲ್ಲಿ ಗುರುವಾರ ನಡೆದಿದೆ.

ಗಾಳಿಪಟವನ್ನು ಹಿಡಿಯಲು ಓಡುತ್ತಿದ್ದ ಬಾಲಕ ಆಳವಾದ ಸಗಣಿ ಹೊಂಡದೊಳಗೆ ಬಿದ್ದಿದ್ದಾನೆ. ಮಕರ ಸಂಕ್ರಾಂತಿ ದಿನವಾದ ಗುರುವಾರ ಮಧ್ಯಾಹ್ನ ಲಾಲ್ಜಿ ಪಾಡಾ ಸಮೀಪದ ಎಸ್‍ಆರ್‍ಎ ಕಾಲನಿಯಲ್ಲಿ ನಡೆದಿದೆ.

ಮಕರ ಸಂಕ್ರಾಂತಿ ದಿನವಾಗಿದ್ದ ಕಾರಣ ಮಕ್ಕಳು ದಿನವಿಡೀ ಗಾಳಿಪಟದಲ್ಲಿ ಆಡುತ್ತಿದ್ದರು. ತನ್ನ ಮನೆಯ ಸಮೀಪ ಬಾಲಕ ಗಾಳಿಪಟ ಹಾರಿಸುತ್ತಿದ್ದ. ಗಾಳಿಪಟ ಹಾರಿಹೋಗಿ ಸಗಣಿ ಹೊಂಡದ ಬಳಿ ಬಿದ್ದಿರುವುದು ಬಾಲಕನ ಅರಿವಿಗೆ ಬಂದಿರಲಿಲ್ಲ.   ಗಾಳಿಪಟವನ್ನು ಹಿಡಿಯುವ ಯತ್ನದಲ್ಲಿ ಜಿಗಿದಿದ್ದ ಬಾಲಕ ಸಗಣಿ ಹೊಂಡಕ್ಕೆ ಬಿದ್ದಿದ್ದಾನೆ. ಸಗಣಿ ಹೊಂಡದ ಸಮೀಪ ಕಟ್ಟಡ ನಿರ್ಮಾಣದಲ್ಲಿ ತೊಡಗಿದ್ದ ಕಾರ್ಮಿಕರು ಬೊಬ್ಬೆ ಹಾಕಿ ಎಲ್ಲರನ್ನು ಕರೆದಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 ಬಾಲಕ ಸಗಣಿ ಹೊಂಡದ ಆಳಕ್ಕೆಬಿದ್ದ ಕಾರಣ ಕಟ್ಟಡ ನಿರ್ಮಾಣದ ಕಾರ್ಮಿಕರು ಹಾಗೂ ಕ್ರೇನ್ ಮೂಲಕ ಬಾಲಕನ ಮೃತದೇಹವನ್ನು ಹೊರ ತೆಗೆಯಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News