ಕೃಷಿ ಕಾನೂನು ಸುಧಾರಣೆ ತರಬಹುದು, ಆದರೆ ಬಾಧಿತರ ಹಿತಾಸಕ್ತಿ ರಕ್ಷಿಸಬೇಕು: ಐಎಂಎಫ್

Update: 2021-01-15 06:55 GMT

ಹೊಸದಿಲ್ಲಿ,ಜ.15: ಭಾರತದ ನೂತನ ಕೃಷಿ ಕಾನೂನುಗಳು ಕೃಷಿ ಕ್ಷೇತ್ರದಲ್ಲಿ ಸುಧಾರಣೆಗಳ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗುವ ಸಾಧ್ಯತೆಗಳನ್ನು ಹೊಂದಿವೆ ಎಂದು ನಾವು ನಂಬಿದ್ದೇವೆ, ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಕಮ್ಯುನಿಕೇಶನ್ಸ್ ನಿರ್ದೇಶಕ ಗೆರ್ರಿ ರೈಸ್ ವಾಷಿಂಗ್ಟನ್‍ನಲ್ಲಿ ಗುರುವಾರ ಹೇಳಿದ್ದಾರೆ. ಅದೇ ಸಮಯ ಈ ಹೊಸ ವ್ಯವಸ್ಥೆಯತ್ತ ಸಾಗುವಾಗ ಬಹಳಷ್ಟು ಬಾಧಿತರಾಗುವಂತಹ ಜನರ ಹಿತಾಸಕ್ತಿಗಳನ್ನು ರಕ್ಷಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕೃಷಿ ಕ್ಷೇತ್ರದಲ್ಲಿನ ಸುಧಾರಣೆಗಳಿಂದ ಬಾಧಿತರಾದವರಿಗೆ ಸೂಕ್ತ ಉದ್ಯೋಗಾವಕಾಶಗಳು ದೊರಕುವಂತೆ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ದಿಲ್ಲಿಯ ಗಡಿಗಳಲ್ಲಿ ಕಳೆದ ಹಲವಾರು ದಿನಗಳಿಂದ ಪ್ರತಿಭಟಿಸುತ್ತಿರುವ ರೈತರ ಪ್ರತಿನಿಧಿಗಳು ಹಾಗೂ ಕೇಂದ್ರ ಸರಕಾರದ ನಡುವೆ ಒಂಬತ್ತನೇ ಸುತ್ತಿನ ಮಾತುಕತೆಗಳು ಇಂದು ನಡೆಯಲಿರುವುದರಿಂದ ಈ ಹಿನ್ನೆಲೆಯಲ್ಲಿ ಐಎಂಎಫ್‍ನ ಹಿರಿಯ ಅಧಿಕಾರಿಯ ಹೇಳಿಕೆ ಮಹತ್ವ ಪಡೆದಿದೆ. ಹೊಸದಾಗಿ ಜಾರಿಗೆ ಬಂದಿರುವ ಮೂರು ಕೃಷಿ ಕಾಯಿದೆಗಳನ್ನು ವಾಪಸ್ ಪಡೆಯಲೇಬೇಕು ಎಂಬುದು ಪ್ರತಿಭನಾನಿರತ ರೈತರ ಆಗ್ರಹವಾಗಿದ್ದರೆ ಕೇಂದ್ರ ಸರಕಾರ ಮಾತ್ರ ಇದಕ್ಕೆ ಒಪ್ಪಿಲ್ಲ, ಬದಲು ಕೆಲವೊಂದು ತಿದ್ದುಪಡಿಗಳನ್ನು ತರಲು ಸಿದ್ಧ ಎಂದು ಹೇಳುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News