ʼಈ ಕೃಷಿ ಕಾಯ್ದೆಯು ರೈತರನ್ನು ಮುಗಿಸುತ್ತದೆʼ: ಪ್ರತಿಭಟನೆಯಲ್ಲಿ ರಾಹುಲ್‌ ಗಾಂಧಿ ಹೇಳಿಕೆ

Update: 2021-01-15 10:07 GMT

ಹೊಸದಿಲ್ಲಿ: ಕಳೆದ ಹಲವಾರು ದಿನಗಳಿಂದ ರಾಜಧಾನಿಯ ಗಡಿಗಳಲ್ಲಿ ಕೇಂದ್ರದ ನೂತನ ಕೃಷಿ ಕಾಯಿದೆ ವಾಪಸಾತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸಿ ಕಾಂಗ್ರೆಸ್ ನಾಯಕರುಗಳಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ವಾದ್ರಾ ಇಂದು ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ಅಧಿಕೃತ ನಿವಾಸದೆದುರು ಪ್ರತಿಭಟನೆ ನಡೆಸಿದ್ದಾರೆ.

ಕಾಂಗ್ರೆಸ್ ಪಕ್ಷದ 'ಸ್ಪೀಕ್ ಅಪ್ ಫಾರ್ ಕಿಸಾನ್ ಅಧಿಕಾರ್' ಅಭಿಯಾನದ ಅಂಗವಾಗಿ ಈ ಪ್ರತಿಭಟನೆ ನಡೆಸಲಾಗಿದೆ. ಕಾಂಗ್ರೆಸ್ ಪಕ್ಷ ಇಂದು ದೇಶಾದ್ಯಂತ ಕಿಸಾನ್ ಅಧಿಕಾರ್ ದಿವಸ್ ಎಂದು ಆಚರಿಸುತ್ತಿದ್ದು ಎಲ್ಲಾ ರಾಜ್ಯಗಳ ರಾಜ್ ಭವನ್ ಎದುರು ಪಕ್ಷ ನಾಯಕರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

"ಬಿಜೆಪಿ ಸರಕಾರ ಕೃಷಿ  ಕಾನೂನುಗಳನ್ನು ವಾಪಸ್ ಪಡೆಯಲೇಬೇಕು. ಅಲ್ಲಿಯ ತನಕ ಕಾಂಗ್ರೆಸ್ ಪಕ್ಷವು ಜಗ್ಗುವುದಿಲ್ಲ. ಈ ಕಾನೂನುಗಳು ರೈತರ ಸಹಾಯಕ್ಕಾಗಿ ಅಲ್ಲ, ಬದಲು ಅವರನ್ನು ಮುಗಿಸುತ್ತವೆ," ಎಂದು ರಾಹುಲ್ ಹೇಳಿದರು.

"ನರೇಂದ್ರ ಮೋದಿ ಸರಕಾರ ಈ ಹಿಂದೆ ಭೂಸ್ವಾಧೀನ ಕಾಯಿದೆ ಮುಖಾಂತರ ರೈತರ ಜಮೀನು ಸೆಳೆಯಲು ಯತ್ನಿಸಿತ್ತು. ಆಗ ಕಾಂಗ್ರೆಸ್ ಪಕ್ಷ ಅದನ್ನು ತಡೆಯಲು ಸಮರ್ಥವಾಗಿತ್ತು. ಆದರೆ ಈಗ ಬಿಜೆಪಿ ಮತ್ತದರ ಇಬ್ಬರು-ಮೂವರು ಸ್ನೇಹಿತರು  ಈ ಮೂರು ಕೃಷಿ ಕಾನೂನುಗಳ ಮೂಲಕ ರೈತರ ಮೇಲೆ ಮತ್ತೆ ದಾಳಿ ನಡೆಸುತ್ತಿವೆ" ಎಂದು ರಾಹುಲ್ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News