ಈಶ್ವರಮಂಗಲ : ಜ.16ರಂದು ಸರಕಾರಿ ಸವಲತ್ತುಗಳ ಮಾಹಿತಿ ಶಿಬಿರ

Update: 2021-01-15 11:01 GMT

ಈಶ್ವರಮಂಗಲ : ಕರ್ನಾಟಕ ಮುಸ್ಲಿಂ ಜಮಾಅತ್ ಈಶ್ವರಮಂಗಲ ವಲಯ ಹಾಗೂ ಡಿಜಿಟಲ್ ಇಂಡಿಯಾ ಜನ ಸಂಪರ್ಕ ಕೇಂದ್ರ ಪುತ್ತೂರು ಸಹಯೋಗದೊಂದಿಗೆ ಜ.16ರಂದು ಬೆಳಗ್ಗೆ 9:30 ರಿಂದ ತ್ವೈಬ ಸೆಂಟರ್ ಈಶ್ವರಮಂಗಲ ನಲ್ಲಿ ಸರಕಾರಿ ಸವಲತ್ತುಗಳ ಮಾಹಿತಿ ಶಿಬಿರ ನಡೆಯಲಿದೆ.

ಈ ಸಂದರ್ಭ ವಿಧವಾ ವೇತನ, ವೃಧಾಪ್ಯ ವೇತನ, ಮನಸ್ವಿನಿ ಯೋಜನಾ ವೇತನ, ಅಲ್ಪ ಸಂಖ್ಯಾತ ಸವಲತ್ತುಗಳು, ವಕ್ಫ್ ಬೋರ್ಡ್ ಸೌಲಭ್ಯಗಳು, ಕಟ್ಟಡ ಕಾರ್ಮಿಕ ಸವಲತ್ತುಗಳು, ಪಾನ್ ಕಾರ್ಡ್, ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡ್, ಹಿರಿಯ ನಾಗರಿಕರಿಗೆ ಕಾರ್ಡ್, ವಿದ್ಯಾರ್ಥಿ ಬಸ್ ಪಾಸ್ ಹಾಗೂ ಇನ್ನಿತರ ಮಾಹಿತಿಗಳ ಸಮಗ್ರ ಕಾರ್ಯಾಗಾರ ಹಾಗೂ ದಾಖಲೆಗಳ ಸಹಿತ ಬಂದವರಿಗೆ ಈ ಎಲ್ಲ ಯೋಜನೆಗಳನ್ನು ಮಾಡಿಕೊಡಲಾಗವುದು. ಆಧಾರ್ ಕಾರ್ಡ್, ರೇಷನ್ ಕಾರ್ಡ್, ಫೋಟೋಗಳು, ಬ್ಯಾಂಕ್ ಪಾಸ್ ಬುಕ್ ತರಬೇಕಾಗಿ ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News