ಎರ್ನಾಕುಲಂ-ಓಕಾ ರೈಲಿಗೆ ಬೋಗಿ ಹೆಚ್ಚಳ

Update: 2021-01-15 14:05 GMT

ಉಡುಪಿ, ಜ.15: ಎರ್ನಾಕುಲಂ-ಓಕಾ ಮಧ್ಯೆ ಸಂಚರಿಸುವ ಪಾಕ್ಷಿಕ ಹಬ್ಬದ ವಿಶೇಷ ರೈಲಿಗೆ ಮೂರು ಕೋಚ್‌ಗಳನ್ನು ಶಾಶ್ವತ ವಾಗಿ ಹೆಚ್ಚಿಸಲು ನಿರ್ಧರಿಸಲಾಗಿದೆ. ಇದರಿಂದ ಈಗಿರುವ 18 ಬೋಗಿಗಳ ಬದಲು 21 ಬೋಗಿಗಳೊಂದಿಗೆ ರೈಲು ಸಂಚರಿಸಲಿದೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.

ಇವುಗಳಲ್ಲಿ ಒಂದು ಕೋಚ್ 3 ಟಯರ್ ಎಸಿ, ಒಂದು ಸ್ಲೀಪರ್ ಕೋಚ್ ಹಾಗೂ ಇನ್ನೊಂದು ಸೆಕೆಂಡ್ ಸೀಟಿಂಗ್ ಕೋಚ್ ಆಗಿದೆ. ಹೆಚ್ಚುವರಿ ಕೋಚ್ ಗಳೊಂದಿಗೆ ಎರ್ನಾಕುಲಂನಿಂದ ಜ.15 ಹಾಗೂ ಓಕಾದಿಂದ ಜ.16ರಿಂದ ರೈಲು ನಂ. 06338 ಹಾಗೂ 06337 ಸಂಚಾರ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News