ಅಮೆರಿಕ: ಕುಖ್ಯಾತ ಮತ್ತು ನಕಲಿ ಮಾರುಕಟ್ಟೆಗಳ ಪಟ್ಟಿಯಲ್ಲಿ ಬಾರತದ ಸ್ನಾಪ್ ಡೀಲ್

Update: 2021-01-15 14:35 GMT

ವಾಶಿಂಗ್ಟನ್, ಜ. 15: ಭಾರತದ ಬೃಹತ್ ಆನ್‌ಲೈನ್ ಅಂಗಡಿಗಳ ಪೈಕಿ ಒಂದಾಗಿರುವ ಸ್ನಾಪ್‌ಡೀಲ್ ಮತ್ತು ನಾಲ್ಕು ವ್ಯಾಪಾರ ಮಳಿಗೆಗಳ ಸಂಕೀರ್ಣಗಳನ್ನು ಅಮೆರಿಕದ ವ್ಯಾಪಾರ ಪ್ರತಿನಿಧಿ ಕಚೇರಿಯು, ‘ನಕಲಿ ಮತ್ತು ಪೈರಸಿಯಲ್ಲಿ ತೊಡಗಿರುವ ಕುಖ್ಯಾತ ಮಾರುಕಟ್ಟೆಗಳ 2020ರ ಪಟ್ಟಿ’ಯಲ್ಲಿ ಸೇರಿಸಿದೆ.

 ಆನ್‌ಲೈನ್ ಅಂಗಡಿ ಸ್ನಾಪ್‌ಡೀಲ್ ಹೊರತಾಗಿ, ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಆಫ್‌ಲೈನ್ ಅಂಗಡಿಗಳೆಂದರೆ ಮುಂಬೈಯ ಹೀರಾ ಪನ್ನಾ, ಕೋಲ್ಕತಾದ ಕಿಡ್ಡರ್‌ಪೋರ್ ಹಾಗೂ ದಿಲ್ಲಿಯ ಪಾಲಿಕಾ ಬಝಾರ್ ಮತ್ತು ಟ್ಯಾಂಕ್ ರೋಡ್.

ಅಮೆರಿಕ ವ್ಯಾಪಾರ ಪ್ರತಿನಿಧಿ ಕಚೇರಿಯ ಕುಖ್ಯಾತ ಮಾರುಕಟ್ಟೆಗಳ ಕಳೆದ ವರ್ಷದ ಪಟ್ಟಿಯಲ್ಲಿ ಮಿರೆರಾಮ್ ರಾಜಧಾನಿ ಐಝಾಲ್‌ನಲ್ಲಿರುವ ಮಿಲೇನಿಯಮ್ ಸೆಂಟರ್‌ನ ಹೆಸರಿತ್ತು. ಈ ಬಾರಿ ಅದರ ಸ್ಥಾನವನ್ನು ಪಾಲಿಕಾ ಬಝಾರ್ ವಹಿಸಿಕೊಂಡಿದೆ.

ಜಾಗತಿಕ ಮಟ್ಟದಲ್ಲಿ, ಪ್ರತಿಷ್ಠಿತ ಕಂಪೆನಿಗಳ ಟ್ರೇಡ್‌ಮಾರ್ಕ್‌ಗಳನ್ನು ಬಳಸಿಕೊಂಡು ಉತ್ಪಾದಿಸಲಾಗುವ ನಕಲಿ ವಸ್ತುಗಳನ್ನು ಮಾರಾಟ ಮಾಡುವ 39 ಆನ್‌ಲೈನ್ ಅಂಗಡಿಗಳು ಮತ್ತು 34 ಸಾಂಪ್ರದಾಯಿಕ (ಆಫ್‌ಲೈನ್) ಅಂಗಡಿಗಳನ್ನು ಪಟ್ಟಿಯಲ್ಲಿ ಹೆಸರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News