ಪಡುಕೆರೆಯಲ್ಲಿ ಮರೀನಾ ನಿರ್ಮಾಣಕ್ಕೆ ವಿರೋಧ; ಯೋಜನೆ ಬಂದರೆ ಪ್ರಾಣ ತ್ಯಾಗಕ್ಕೂ ಸಿದ್ಧ: ಜನಾರ್ದನ ತಿಂಗಳಾಯ

Update: 2021-01-15 15:32 GMT

ಉಡುಪಿ, ಜ.15: ಮಲ್ಪೆ ಪಡುಕೆರೆ ಬೀಚ್‌ನಲ್ಲಿ ರಾಜ್ಯ ಸರಕಾರ ನಿರ್ಮಿ ಸಲು ಉದ್ದೇಶಿಸಿರುವ ಮರೀನಾಗೆ ಪಡುಕೆರೆ ಶ್ರೀಬಾಲಾಂಜನೆಯ ಪೂಜಾ ಮಂದಿರದ ವಠಾರದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ ಜನಜಾಗೃತಿ ಸಭೆಯಲ್ಲಿ ಒಕ್ಕೋರಲಿನ ವಿರೋಧ ವ್ಯಕ್ತವಾಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಮಲ್ಪೆ ಸಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಜನಾರ್ದನ ತಿಂಗಳಾಯ, ‘ಇಲ್ಲಿಯೇ ಹುಟ್ಟಿ ಬೆಳೆದ ನಮ್ಮನ್ನು ಕೆಲವೇ ಕೆಲವು ಮಂದಿಯ ಐಷಾರಾಮಿ ಜೀವನಕ್ಕೆ ಒಳಿತಾಗುವ ಮರೀನಾ ಕ್ಕಾಗಿ ಎತ್ತಂಗಡಿ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಪಡುಕೆರೆ ಯಲ್ಲಿ ಮರೀನಾ ನಿರ್ಮಿಸುವುದು ಬೇಡ’ ಎಂದು ಹೇಳಿದರು.

ಇದು ರಾಜಕಾರಣಿಗಳಿಗೆ ಹಣ ಮಾಡುವ ಒಳ್ಳೆಯ ಸಂದರ್ಭ ಆಗಿದೆ. ಈ ವಿಚಾರದಲ್ಲಿ ಸುಳ್ಳುಗಳನ್ನು ಹೇಳಿ ನಮ್ಮನ್ನು ಮೋಸ ಮಾಡಲಾಗುತ್ತಿದೆ. ಇದರ ವಿರುದ್ಧ ಎಲ್ಲರು ಒಂದಾಗಿ ಹೋರಾಟ ಮಾಡಬೇಕಾಗಿದೆ. ಕಾನೂನಿನ ಮೂಲಕ ನಮ್ಮನ್ನು ತಡೆಯಲು ಪ್ರಯತ್ನಿಸಿದರೆ ಪ್ರಾಣ ಕೊಡಲೂ ತಯಾರಾಗ ಬೇಕು. ಇದನ್ನು ಜಿಲ್ಲಾಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು ಎಂದರು.

ಕಾರವಾರದಲ್ಲಿ ಅನುಷ್ಠಾನಕ್ಕೆ ತಂದ ಯೋಜನೆಯೊಂದಕ್ಕೆ ಸಂಬಂಧಿಸಿ ಅಲ್ಲಿನ ಮೀನುಗಾರರನ್ನು ಕಡಲ ತೀರದಿಂದ ಎತ್ತಂಗಡಿ ಮಾಡಿ, ದೂರ ಗುಡ್ಡದಲ್ಲಿ ವಸತಿ ವ್ಯವಸ್ಥೆ ನೀಡಲಾಗಿತ್ತು. ಆದರೆ ಆ ಮೀನುಗಾರರಿಗೆ ಮೀನುಗಾರಿಕೆ ಬಿಟ್ಟು ಬೇರೆ ಯಾವುದೇ ವೃತ್ತಿ ಮಾಡಲು ಸಾಧ್ಯವಿಲ್ಲ. ಇಂದು ಅವರೆಲ್ಲ ಬೀಚ್ ಬದಿಯಲ್ಲಿ ಬಂದು ಟೆಂಟ್ ಹಾಕಿ ವಾಸ ಮಾಡುವಂತಾಗಿದೆ. ಅಂತಹ ಸ್ಥಿತಿ ನಮಗೆ ಆಗಬಾರದು ಎಂದು ಅವರು ತಿಳಿಸಿದರು.

ಮೀನುಗಾರ ಹಿರಿಯ ಮುಖಂಡ ರಾಮ ಕಾಂಚನ್ ಮಾತನಾಡಿ, ಕೇಲವೇ ಕೆಲವು ಮಂದಿಯ ಐಷರಾಮಿ ಜೀವನಕ್ಕಾಗಿ ನಿರ್ಮಿಸುವ ಮರೀನಾದಿಂದಾಗಿ ಇಲ್ಲೇ ಹುಟ್ಟಿ ಬೆಳೆದ ನಾವು ಮುಂದೆ ಎಲ್ಲೋ ಸಾಯುವ ಪರಿಸ್ಥಿತಿ ನಿರ್ಮಾಣ ಆಗಬಹುದು. ಇದರಿಂದ ಪ್ರಾಕೃತಿಕವಾದ ಮಲ್ಪೆ ಮೀನುಗಾರಿಕಾ ಬಂದರಿಗೂ ತೊಂದರೆ ಎದುರಾಗಲಿದೆ. ಆದುದರಿಂದ ಈ ಬಗ್ಗೆ ಜನಾಭಿಪ್ರಾಯವನ್ನು ಕ್ರೋಢಿಕರಿಸಿ ಸರಕಾರಕ್ಕೆ ಸಲ್ಲಿಸುವ ಕಾರ್ಯ ಮಾಡಲಾಗುವುದು ಎಂದರು.

ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ ಮಾತನಾಡಿ, ಮರೀನಾ ಯೋಜನೆಗೆ ವಿರೋಧ ವ್ಯಕ್ತಪಡಿಸಿ, ಈ ಯೋಜನೆಯನ್ನು ಕೈಬಿಡು ವಂತೆ ಒತ್ತಾಯಿಸಿ ಸಂಘವು ಸ್ಥಳೀಯ ಶಾಸಕರಿಗೆ ಪತ್ರ ಬರೆದಿದೆ. ಜ.18ರಂದು ಜಿಲ್ಲೆಗೆ ಆಗಮಿಸಲಿ ರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ನಮ್ಮ ಅಹವಾಲು ಸಲಿ್ಲಸಲಾಗುವುದು ಎಂದು ಹೇಳಿದರು.

ಮೀನುಗಾರಿಕೆ ಉಳಿಸುವ ನಿಟ್ಟಿನಲ್ಲಿ ಮತ್ತು ಅದನ್ನು ನಂಬಿರುವ ಮೀನು ಗಾರರ ಹಿತೃದಷ್ಠಿಯಿಂದ ಇದನ್ನು ವಿರೋಧಿಸಲಾ ಗುವುದು. ಹೊರದೇಶದಿಂದ ಬರುವವರ ಅನುಕೂಲಕ್ಕಾಗಿ ಮತ್ತು ಮೀನುಗಾರರಿಗೆ ಕೆಡುಕು ಉಂಟು ಮಾಡುವ ಈ ಯೋಜನೆ ಯನ್ನು ಸರಕಾರ ಕೈಬಿಡಬೇಕು ಎಂದು ಅವರು ಒತ್ತಾಯಿಸಿದರು.

ಸಭೆಯಲ್ಲಿ ಶ್ರೀಬಾಲಾಂಜನೆಯ ಪೂಜಾ ಮಂದಿರದ ಅಧ್ಯಕ್ಷ ದೇವದಾಸ ಕೋಟ್ಯಾನ್, ಸಂವೇದನಾ ಪೌಂಡೇಶನ್‌ನ ಸ್ಥಾಪಕಾಧ್ಯಕ್ಷ ಪ್ರಕಾಶ್ ಮಲ್ಪೆ, ಮಟ್ಟು ಶ್ರೀರಾಮ ಭಜನಾ ಮಂದಿರದ ಮಹಿಳಾ ಮಂಡಳಿಯ ಅಧ್ಯಕ್ಷೆ ಸುಮಿತ್ರಾ ಕುಂದರ್, ಪಡುಕೆರೆ ಪಂಡರೀನಾಥ ಭಜನಾ ಮಂದಿರದ ಗೌರವಾಧ್ಯಕ್ಷ ಶಿವ ರಾಮ ಪುತ್ರನ್ ಉಪಸ್ಥಿತರಿದ್ದರು. ಪುರಂದರ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ರಮೇಶ್ ಮೆಂಡನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News