ಟ್ರಂಪ್ ಬೆಂಬಲಿಗರು ಸಂಸದರನ್ನು ಕೊಲ್ಲುವ ಉದ್ದೇಶ ಹೊಂದಿದ್ದರು: ಫೆಡರಲ್ ಪ್ರಾಸಿಕ್ಯೂಟರ್

Update: 2021-01-15 15:48 GMT

ವಾಶಿಂಗ್ಟನ್, ಜ. 15: ಕಳೆದ ವಾರ ಸಂಸತ್ ಮೇಲೆ ದಾಳಿ ನಡೆಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಬೆಂಬಲಿಗರು ಚುನಾಯಿತ ಪ್ರತಿನಿಧಿಗಳನ್ನು ಬಂಧಿಸಿ ಹತ್ಯೆ ಮಾಡುವ ಉದ್ದೇಶ ಹೊಂದಿದ್ದರು ಎಂದು ಫೆಡರಲ್ ಪ್ರಾಸಿಕ್ಯೂಟರ್‌ಗಳು ನ್ಯಾಯಾಲಯಕ್ಕೆ ಹೇಳಿದ್ದಾರೆ.

‘ಕ್ಯೂಅನಾನ್ ಪಿತೂರಿ ಸಿದ್ಧಾಂತಿ’ ಜಾಕೋಬ್ ಚಾನ್‌ಸ್ಲಿಯ ಬಂಧನಕ್ಕಾಗಿ ವಾರಂಟ್ ಹೊರಡಿಸುವಂತೆ ಕೋರಿ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಪ್ರಾಸಿಕ್ಯೂಟರ್‌ಗಳು ಹೀಗೆ ಹೇಳಿದ್ದಾರೆ.

ಕೊಂಬುಗಳನ್ನು ಧರಿಸಿಕೊಂಡು ಅವೆುರಿಕ ಸೆನೆಟ್‌ನ ಚೇಂಬರ್‌ನಲ್ಲಿರುವ ಉಪಾಧ್ಯಕ್ಷ ಮೈಕ್ ಪೆನ್ಸ್‌ರ ಡೆಸ್ಕ್‌ನಲ್ಲಿ ನಿಂತು ಆ ವ್ಯಕ್ತಿಯು ತೆಗೆಸಿಕೊಂಡಿರುವ ಚಿತ್ರ ಭಾರೀ ಪ್ರಚಾರ ಪಡೆದುಕೊಂಡಿದೆ.

ಆ ವ್ಯಕ್ತಿಯು ಉಪಾಧ್ಯಕ್ಷರಿಗೆ ಒಂದು ಚೀಟಿಯನ್ನೂ ಬಿಟ್ಟು ಹೋಗಿದ್ದಾನೆ ಎನ್ನುವುದನ್ನು ಎಫ್‌ಬಿಐ ಪತ್ತೆಹಚ್ಚಿದೆ. ‘‘ನಿಮಗೆ ಶಿಕ್ಷೆ ಕಾದಿದೆ. ಯಾವಾಗ ಎನ್ನುವುದನ್ನು ಕಾಲ ನಿರ್ಧರಿಸುತ್ತದೆ’’ ಎಂಬುದಾಗಿ ಆ ಚೀಟಿಯಲ್ಲಿ ಬರೆಯಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News