ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆ
Update: 2021-01-15 21:19 IST
ಕಾರ್ಕಳ, ಜ.15: ತಾಯಿ ತನ್ನ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿರುವ ಘಟನೆ ಜ.13ರಂದು ಸಂಜೆ ವೇಳೆ ಮಿಯಾರು ಜೋಡುಕಟ್ಟೆ ಎಂಬಲ್ಲಿ ನಡೆದಿದೆ.
ಜೋಡುಕಟ್ಟೆ ಸುರೇಖ ನಗರದ ಗಣೇಶ (29) ಎಂಬವರ ಪತ್ನಿ ಜ್ಯೋತಿ (25) ತನ್ನ ಮಕ್ಕಳಾದ ಚರಣ್ (7) ಹಾಗೂ ಮಗಳು ತೃಪ್ತಿ (5)ಯೊಂದಿಗೆ ಮನೆಯಲ್ಲಿ ಯಾರಿಗೂ ಹೇಳದೆ ಹೋಗಿದ್ದು, ಈವರೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.