ಆಸ್ತಿ ವಿಚಾರದಲ್ಲಿ ತಕರಾರು: ಆತ್ಮಹತ್ಯೆ
Update: 2021-01-15 21:23 IST
ಉಡುಪಿ, ಜ.15: ಮನೆಯ ಜಾಗದ ವಿಚಾರದಲ್ಲಿನ ತಕರಾರಿನಿಂದ ಜೀವನದಲ್ಲಿ ಜಿಗುಪ್ಸೆ ಗೊಂಡ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ 76ನೇ ಬಡಗುಬೆಟ್ಟು ಗ್ರಾಮದ ಬೈಲೂರು ಎಂಬಲ್ಲಿ ನಡೆದಿದೆ.
ಮೃತರನ್ನು ಕುಂದಾಪುರ ಕೊಂಗೇರಿ ನಿವಾಸಿ ಉಷಾಲತಾ ಎಂಬವರ ಪತಿ ಸುರೇಶ್ ಶೆಟ್ಟಿ(45) ಎಂದು ಗುರುತಿಸಲಾಗಿದೆ. ಇವರು ಜ.10ರಿಂದ ಜ.14ರ ಮಧ್ಯಾವಧಿಯಲ್ಲಿ ಬೈಲೂರಿನಲ್ಲಿರುವ ಸುನೀತಾ ಉದಯ ಶೆಟ್ಟಿ ಎಂಬವರ ವಾಸ್ತವ್ಯ ರಹಿತ ಮನೆಯ ಪಾಳು ಬಿದ್ದ ದನದ ಕೊಟ್ಟಿಗೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.