ಉಡುಪಿ : ಶುಕ್ರವಾರ ಪಿಯುಸಿ ಶೇ.77.25 ಹಾಜರಾತಿ

Update: 2021-01-15 15:55 GMT

ಉಡುಪಿ, ಜ.15: ಶುಕ್ರವಾರ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿಯಲ್ಲಿ ಶೇ. 77.25ರಷ್ಟು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಿ ದ್ದಾರೆ ಎಂದು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ದ್ವಿತೀಯ ಪಿಯುಸಿಯ ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಒಟ್ಟು 14718 ವಿದ್ಯಾರ್ಥಿಗಳಿದ್ದು, ಇವರಲ್ಲಿ 11,371 ಮಂದಿ (ಶೇ.77.25) ಇಂದು ತರಗತಿಗೆ ಹಾಜರಾಗಿದ್ದಾರೆ. 7256 ಬಾಲಕರ ಪೈಕಿ 5298 ಮಂದಿ (ಶೇ.73.01) ಹಾಗೂ 7531 ಬಾಲಕಿಯರ ಪೈಕಿ 6079 (ಶೇ.80.71) ಮಂದಿ ಇಂದು ತರಗತಿಯಲ್ಲಿ ಪಾಠ ಕೇಳಿದ್ದಾರೆ.

ಎಸೆಸೆಲ್ಸಿಯಲ್ಲಿ ಶೇ.82.6: ಶುಕ್ರವಾರ ಎಸೆಸೆಲ್ಸಿಯಲ್ಲಿ ಶೇ.82.6 ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದು, ಸರಕಾರಿ ಶಾಲೆಗಳಲ್ಲಿ ಶೇ.85, ಅನುದಾನಿತ ಶಾಲೆಗಳಲ್ಲಿ ಶೇ.79, ಅನುದಾನ ರಹಿತ ಶಾಲೆಗಳಲ್ಲಿ ಶೇ84 ಮಂದಿ ಹಾಜರಾಗಿದ್ದರು.

ವಿದ್ಯಾಗಮ: ವಿದ್ಯಾಗಮದಲ್ಲಿ ಆರನೇ ತರಗತಿಯಲ್ಲಿ ಶೇ.64.6 ಹಾಗೂ 8ನೇ ತರಗತಿಯಲ್ಲಿ ಶೇ.61.6ರಷ್ಟು ವಿದ್ಯಾರ್ಥಿಗಳು ಇಂದು ಶಾಲೆಗಳಿಗೆ ಹಾಜರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ.

ಮತ್ತೊಬ್ಬ ಶಿಕ್ಷಕ ಪಾಸಿಟಿವ್: ಪ್ರಾಥಮಿಕ ಶಾಲೆಯ ಇನ್ನೊಬ್ಬ ಶಿಕ್ಷಕರು ಕೊರೋನಕ್ಕೆ ಪಾಸಿಟಿವ್ ಬಂದಿದ್ದು, ಈ ಮೂಲಕ ಪಾಸಿಟಿವ್ ಬಂದ 6ನೇ ಶಿಕ್ಷಕ ಇವರಾಗಿದ್ದಾರೆ. ಪ್ರಾಥಮಿಕ ಶಾಲೆಗಳ ನಾಲ್ವರು ಹಾಗೂ ಪ್ರೌಢ ಶಾಲೆಗಳ ಇಬ್ಬರು ಶಿಕ್ಷಕರು ಇದುವರೆಗೆ ಪಾಸಿಟವ್ ಬಂದಂತಾಗಿದೆ. ಇದರೊಂದಿಗೆ ಪ್ರೌಢ ಶಾಲೆಯ ಒಬ್ಬರ ಸಿಬ್ಬಂದಿಯೂ ಪಾಸಿಟಿವ್ ಬಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News