ಸ್ಕೂಟರ್ ಕಳವು : ದೂರು

Update: 2021-01-15 17:15 GMT

ಮಂಗಳೂರು, ಜ.15: ನಗರದ ದುಬೈ ಮಾರ್ಕೆಟ್ ಸಮೀಪ ಪಾರ್ಕ್ ಮಾಡಲಾದ ಸ್ಕೂಟರ್‌ಕಳವಾದ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಗೌತಮ್ ಎಂಬವರು ತಮ್ಮ ಸುಝುಕಿ ಎಕ್ಸಸ್ ಸ್ಕೂಟರ್‌ನ್ನು ಜ.12ರಂದು ರಾತ್ರಿ 7:30ರ ವೇಳೆಗೆ ಸೆಂಟ್ರಲ್ ಮಾರ್ಕೆಟ್ ಸಮೀಪದ ದುಬೈ ಮಾರ್ಕೆಟ್ ಎದುರುಗಡೆ ನಿಲ್ಲಿಸಿ ಅದರ ಕೀಯನ್ನು ಅದರಲ್ಲೇ ಬಿಟ್ಟು ಸಾಮಾನು ಖರೀದಿಗೆ ಹೋಗಿದ್ದರು. ರಾತ್ರಿ 8ಗಂಟೆಗೆ ವಾಪಸಾದಾಗ ಸ್ಕೂಟರ್ ನಾಪತ್ತೆಯಾಗಿತ್ತು.

ಎಲ್ಲಿ ಹುಡುಕಾಡಿದರೂ ಸ್ಕೂಟರ್ ಪತ್ತೆಯಾಗದ ಕಾರಣ ಯಾರೋ ಕಳವು ಮಾಡಿಕೊಂಡು ಹೋಗಿರಬಹುದೆಂದು ಅಂದಾಜಿಸಲಾ ಗಿದೆ. ಸ್ಕೂಟರಿನಲ್ಲಿ ಆರ್.ಸಿ. ಕಾರ್ಡ್, ಇನ್ಸೂರೆನ್ಸ್ ಮೂಲ ಪ್ರತಿ, ಎಮಿಶನ್ ಸರ್ಟಿಫಿಕೇಟ್, ಡ್ರೈವಿಂಗ್ ಲೈಸೆನ್ಸ್ ಮೂಲ ಪ್ರತಿ ಇತ್ತು ಎಂದು ತಿಳಿದುಬಂದಿದೆ.

ಈ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News