ಚಿಟ್ ಫಂಡ್ ಪ್ರಕರಣ: ಸಿಬಿಐನಿಂದ ರೋಸ್ ವ್ಯಾಲಿ ಗ್ರೂಪ್‌ನ ಅಧ್ಯಕ್ಷರ ಪತ್ನಿ ಶುಭ್ರಾ ಕುಂಡು ಬಂಧನ

Update: 2021-01-15 17:56 GMT

ಕೋಲ್ಕತಾ,ಜ.15: ಬಹುಕೋಟಿ ರೂ.ಗಳ ಚಿಟ್‌ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ರೋಸ್ ವ್ಯಾಲಿ ಗ್ರೂಪ್‌ನ ಅಧ್ಯಕ್ಷ ಗೌತಮ ಕುಂಡು ಅವರ ಪತ್ನಿ ಶುಭ್ರಾ ಕುಂಡು ಅವರನ್ನು ಸಿಬಿಐನ ಆರ್ಥಿಕ ಅಪರಾಧಗಳ ಘಟಕದ ಅಧಿಕಾರಿಗಳು ಶುಕ್ರವಾರ ಇಲ್ಲಿ ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಶುಭ್ರಾ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ ಬೇಕಾಗಿದ್ದರು. ಪೊಂಝಿ ಹಗರಣದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ಆರೋಪಿಸಲಾಗಿದೆ.

ಕಾನೂನುಬಾಹಿರ ಯೋಜನೆಗಳಲ್ಲಿ ಹೂಡಿಕೆಗಳ ಮೇಲೆ ಅಧಿಕ ಪ್ರತಿಫಲದ ಆಮಿಷವೊಡ್ಡಿದ್ದ ರೋಸ್ ವ್ಯಾಲಿ ಗ್ರೂಪ್ ಸಾವಿರಾರು ಗ್ರಾಹಕರಿಗೆ 12,000 ಕೋ.ರೂ.ಗೂ ಹೆಚ್ಚಿನ ಮೊತ್ತವನ್ನು ವಂಚಿಸಿದ ಆರೋಪಗಳನ್ನು ಎದುರಿಸುತ್ತಿದೆ.

ಗೌತಮ ಕುಂಡು 2015,ಮಾರ್ಚ್‌ನಿಂದಲೂ ಜೈಲಿನಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News