ಜ.16 ರಂದು ದ.ಕ ಜಿಲ್ಲೆಯ 6 ಕೇಂದ್ರಗಳಲ್ಲಿ ಕೋವಿಡ್ ಲಸಿಕೆ : ಡಿಸಿ ರಾಜೇಂದ್ರ

Update: 2021-01-15 17:58 GMT

ಮಂಗಳೂರು, ಜ.15: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜ.16 ರಂದು ಜಿಲ್ಲೆಯ 6ಕೇಂದ್ರಗಳಲ್ಲಿ  ಕೋವಿಡ್ ನಿಯಂತ್ರಣ ಲಸಿಕೆ ನೀಡುವ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಚಾಲನೆ ನೀಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಗೆ 24,500. ಡೋಸ್ ಕೋವಿಡ್ ಲಸಿಕೆ ಯನ್ನು ಜಿಲ್ಲೆಯ 6 ಕೇಂದ್ರಗಳಲ್ಲಿ ಆರೋಗ್ಯ ಕಾರ್ಯಕ ರ್ತೆಯರಿಗೆ  ಲಸಿಕೆಯನ್ನು ನೀಡಲಾಗುವುದು. ಒಟ್ಟು 52,381 ಗುರುತಿಸಲಾದ ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಗುರುತಿಸಲಾದ ಕೇಂದ್ರಗಳು:

1.ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮಂಗಳೂರು-ಆಯುಷ್ ವಿಭಾಗ, 2. ನಗರ ಪ್ರಾಥಮಿಕ ಆರೋಗ್ಯಕೇಂದ್ರ ಸುರತ್ಕಲ್ ಮಂಗಳೂರು
3. ತಾಲೂಕು ಆಸ್ಪತ್ರೆ ಬಂಟ್ವಾಳ, 4. ತಾಲೂಕು ಆಸ್ಪತ್ರೆ ಬೆಳ್ತಂಗಡಿ, 5. ತಾಲೂಕು ಸಾರ್ವಜನಿಕ ಆಸ್ಪತ್ರೆ ಮತ್ತೂರು, 6. ತಾಲೂಕು ಆಸ್ಪತ್ರೆ ಸುಳ್ಯದಲ್ಲಿ ಈ ಲಸಿಕೆ ನೀಡಲಾಗುವುದು.

ಒಂದು ಲಸಿಕಾ ಶಿಬಿರದಲ್ಲಿ ಒಂದು ದಿನಕ್ಕೆ ನೂರು ಮಂದಿ ಫಲಾನುಭವಿಗಳಿಗೆ ಮಾತ್ರ ಲಸಿಕೆಯನ್ನು ನೀಡಲಾಗುವುದು.
ಲಸಿಕಾ ಶಿಬಿರವು ಪೂರ್ವಾಹ್ನ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ .ಫಲಾನುಭವಿಗಳಿಗೆ ಮಾತ್ರ ಲಸಿಕೆಯನ್ನು ನೀಡಲಾಗುವುದು.

ಶಿಬಿರದಲ್ಲಿ ಲಸಿಕೆಗೆ ಯಾವುದೇ ಫಲಾನುಭವಿಗಳ ನೋಂದಾವಣಿ ಇರುವುದಿಲ್ಲ. ಈಗಾಗಲೇ ನೋಂದಾವಣಿಯಾಗಿರುವ ಫಲಾನುಭವಿಗಳನ್ನು ಗುರುತಿಸಿಲಸಿಕೆಯನ್ನು ನೀಡಲಾಗುವುದು.

ಕೋವಿಡ್-19 ವ್ಯಾಕ್ಸಿನೇಷನ್ ಆದ ನಂತರ ಪ್ರತಿಯೊಬ್ಬ ಫಲಾನುಭವಿಯೂ 30 ನಿಮಿಷಗಳ ಕಾಲ ಆರೋಗ್ಯ ಕಾರ್ಯ ಕರ್ತೆಯರ ನಿಗಾವಣೆಯಲ್ಲಿ ಕಡ್ಡಾಯವಾಗಿ (Observation Room) ವಿಶ್ರಾಂತಿ ಪಡೆಯತಕ್ಕದ್ದು. ಲಸಿಕೆಯ ನಂತರ ಏನಾದರೂ ಅಡ್ಡ ಪರಿಣಾಮ ಕಾಣಿಸಿಕೊಂಡಲ್ಲಿ ವೈದ್ಯಕೀಯ ತಂಡದ ಮೂಲಕ ಚಿಕಿತ್ಸೆಗೆ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. 89 ಸರಕಾರಿ,17 ಖಾಸಗಿ ಸಂಸ್ಥೆ ಗಳನ್ನು ಲಸಿಕೆ ನೀಡಲು ಗುರು ತಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News