ಬೈಡನ್ ಸ್ವಾಗತಕ್ಕೆ ಭಾರತೀಯರಿಂದ ಸಾವಿರಾರು ರಂಗೋಲಿ

Update: 2021-01-15 18:19 GMT

ವಾಶಿಂಗ್ಟನ್, ಜ. 15: ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್‌ರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಂದು, ಅವರನ್ನು ಮತ್ತು ನಿಯೋಜಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ರನ್ನು ಸ್ವಾಗತಿಸಲು ಅಮೆರಿಕದಲ್ಲಿರುವ ಭಾರತೀಯರು ಸಂಸತ್‌ನಲ್ಲಿ ಸಾವಿರಾರು ರಂಗೋಲಿಗಳನ್ನು ಬಿಡಿಸುತ್ತಿದ್ದಾರೆ.

ಅವರ ಪ್ರಮಾಣ ವಚನ ಕಾರ್ಯಕ್ರಮ ಜನವರಿ 20ರಂದು ನಡೆಯಲಿದೆ.

‘‘ಗಲಭೆಯ ಬಳಿಕ ಕೊಂಚ ಚೆಲುವು; ಅಮೆರಿಕದ ಸಂಸತ್‌ನ ಎದುರು ಗುರುವಾರ; ಜೋ ಬೈಡನ್ ಮತ್ತು ಕಮಲಾ ಹ್ಯಾರಿಸ್‌ರ ಸ್ವಾಗತಕ್ಕೆ ಸಾವಿರಾರು ರಂಗೋಲಿಗಳನ್ನು ಬಿಡಿಸಲಾಗುತ್ತಿದೆ’’ ಎಂದು ‘ಇಂಡಿಯಾಸ್ಪೋರ-ಫೋರಮ್’ ಟ್ವೀಟ್ ಮಾಡಿದೆ.

ಅಮೆರಿಕದ ವಿಭಜನೆಗೊಂಡ ಮನಸ್ಸುಗಳನ್ನು ಶಮನಗೊಳಿಸುವುದಕ್ಕಾಗಿ ರಂಗೋಲಿಗಳನ್ನು ಬಿಡಿಸಲಾಗುತ್ತಿದೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News