‘ಕೊರೋನ ವ್ಯಾಕ್ಸಿನ್‌ಗೆ ಸ್ವಾಗತ’ ಮರಳು ಶಿಲ್ಪ ಕೃತಿ

Update: 2021-01-16 14:27 GMT

 ಕುಂದಾಪುರ, ಜ.16: ಕೊರೋನ ಸಾಂಕ್ರಮಿಕ ರೋಗದಿಂದ ಇಡೀ ವಿಶ್ವವೇ ತಲ್ಲಣಿಸಿ ಹೋಗಿದ್ದು, ಜಾಗತಿಕ ಮಟ್ಟದಲ್ಲಿ ತುರ್ತು ಪರಿಸ್ಥಿತಿಯ ಸ್ಥಿತಿ ನಿರ್ಮಾಣ ವಾಗಿದೆ. ಕೊರೋನಾಕ್ಕೆ ಲಕ್ಷಾಂತರ ಮಂದಿ ಜೀವ ಕಳೆದುಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಲಸಿಕೆಗಾಗಿ ವಿಶ್ವದ ಜನತೆ ಕಾತರದಿಂದ ಎದುರು ನೋಡುತ್ತಿತ್ತು.

ಇದೀಗ ಕೇಂದ್ರ ಸರಕಾರದ ಅನುಮೋದನೆಯೊಂದಿಗೆ ‘ಕೋವ್ಯಾಕ್ಸಿನ್ ಮತ್ತು ಕೊವಿಶೀಲ್ಡ್’ ಎಂಬ ಎರಡು ಲಸಿಕೆಗಳು ಶನಿವಾರದಿಂದ ಜನತೆಗೆ ಲಭ್ಯವಾಗಿದೆ. ಮೊದಲ ಹಂತದ ಲಸಿಕೆಗೆ ರಾಜ್ಯದಲ್ಲಿ ಶನಿವಾರ ಚಾಲನೆ ನೀಡಲಾಗಿದ್ದು, ಹಿಂದಿನ ಪರಿಸ್ಥಿತಿ ಹಾಗೂ ಆರೋಗ್ಯಕರ ಸುಗಮ ಜೀವನ ಮರಳುವಂತಾಗಲಿ ಎಂಬ ಧ್ಯೇಯದೊಂದಿಗೆ ಉಡುಪಿಯ ‘ಸ್ಯಾಂಡ್ ಥೀಂ’ ತಂಡ ಮರಳು ಶಿಲ್ಪವೊಂದನ್ನು ರಚಿಸಿದೆ.

‘ವೆಲ್‌ಕಂ-ವ್ಯಾಕ್ಸಿನ್’ ಎಂಬ ಶೀರ್ಷಿಕೆಯೊಂದಿಗೆ ಸ್ಯಾಂಡ್ ಥೀಂ ತಂಡದ ಕಲಾವಿದರಾದ ಹರೀಶ್ ಸಾಗಾ, ರಾಘವೇಂದ್ರ ಅವರು ಜೈ ನೇರಳಕಟ್ಟೆ ಕೋಟೇಶ್ವರ ಹಳೆ-ಅಳಿವೆ ಕೋಡಿ ಬೀಚ್‌ನಲ್ಲಿ ಸಾರ್ವಜನಿಕರಿಗಾಗಿ ರಚಿಸಿರುವ 7 ಅಡಿ ಅಗಲ ಹಾಗೂ 4 ಅಡಿ ಎತ್ತರದ ಮರಳುಶಿಲ್ಪಇದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News