ಸಾಲಿಗ್ರಾಮ ಜಾತ್ರೆಯಲ್ಲಿ ಬಲೂನು ವ್ಯಾಪಾರನಿರತ ಮಕ್ಕಳ ರಕ್ಷಣೆ

Update: 2021-01-16 14:30 GMT

ಉಡುಪಿ, ಜ.16: ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೊಲೀಸ್ ಇಲಾಖೆ, ಸಾಲಿಗ್ರಾಮ ಪಟ್ಟಣ ಪಂಚಾಯತ್, ಜಿಲ್ಲಾ ನಾಗರಿಕ ಸೇವಾ ಸಮಿತಿ ಜಂಟಿಯಾಗಿ ಇಂದು ಸಾಲಿಗ್ರಾಮ ಜಾತ್ರೆಯಲ್ಲಿ ಕುಟುಂಬದವ ರೊಂದಿಗೆ ಬಲೂನು ವ್ಯಾಪಾರ ಮಾಡು ತ್ತಿದ್ದ ರಾಜಸ್ತಾನ ಮೂಲದ ಮಕ್ಕಳನ್ನು ರಕ್ಷಿಸಿದೆ.

ಮಾಹಿತಿಯಂತೆ ತಕ್ಷಣ ಕಾರ್ಯಾಚರಣೆ ನಡೆಸಿದ ತಂಡ, ವ್ಯಾಪಾರ ನಡೆ ಸುತ್ತಿದ್ದ 8 ಹೆಣ್ಣು ಮಕ್ಕಳು 4 ಗಂಡು ಮಕ್ಕಳನ್ನು ರಕ್ಷಿಸ ಲಾಯಿತು. ಬಳಿಕ ಪೋಷಕ ರಿಗೆ ಮಕ್ಕಳನ್ನು ದುಡಿಸದೆ ಶಿಕ್ಷಣ ನೀಡುವಂತೆ ಮನವರಿಕೆ ಮಾಡಿಸಿ ತಮ್ಮ ಸ್ವಂತ ಊರಿಗೆ ಹೋಗು ವಂತೆ ರೈಲ್ವೆ ನಿಲ್ದಾಣಕ್ಕೆ ಕಳುಹಿಸಿಕೊಡಲಾಯಿತು. ಭಿಕ್ಷಾಟನೆ ನಿರತ ಸುಮಾರು 16 ಮಕ್ಕಳನ್ನು ರಕ್ಷಿಸಿ ಭಿಕ್ಷಾಟನೆ ಮಾಡದಂತೆ ತಡೆದು ಪೋಷಕರೊಂದಿಗೆ ಕಳುಹಿಸಲಾಯಿತು.

ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸದಾನಂದ ನಾಯಕ್, ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಕೋಟ ಪೊಲೀಸ್ ಉಪ ನಿರೀಕ್ಷಕ ಸಂತೋಷ್ ಬಿ.ಪಿ., ಸಹಾಯಕ ಉಪನಿರೀಕ್ಷಕಿ ಮುಕ್ತಾ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅರುಣ್ ಕುಮಾರ್, ಕೋಟ ಠಾಣಾ ಹೆಡ್ ಕಾನ್ಸ್ಟೇಬಲ್ ಸುರೇಶ್, ರಾಜು, ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಕಪಿಲ, ಸಾಮಾಜಿಕ ಕಾರ್ಯಕರ್ತರಾದ ಯೋಗೀಶ್, ಸುರಕ್ಷಾ, ಸಂದೇಶ್, ಜಿಲ್ಲಾ ನಾಗರಿಕ ಸೇವಾ ಸಮಿತಿಯ ನಿತ್ಯಾನಂದ ವಳಕಾಡು, ತಾರಾನಾಥ್ ಮೇಸ್ತ ಪಾಲ್ಗೊಂಡಿದ್ದರು. ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಲತಾ ಹೆಗ್ಡೆ ಸಹಕಾರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News