×
Ad

ಉಡುಪಿ: ಪೋಷಣ್ ಅಭಿಯಾನ ಕಾರ್ಯಕ್ರಮ

Update: 2021-01-16 20:10 IST

ಉಡುಪಿ, ಜ.16: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಹಾಗೂ ರೋಟರಿ ಉಡುಪಿ ಇವರ ಸಹಯೋಗದೊಂದಿಗೆ ಶುಕ್ರವಾರ ಸಗ್ರಿ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿ, ಬಾಣಂತಿಯರು ತೆಗೆದು ಕೊಳ್ಳಬೇಕಾದ ಮುಂಜಾಗೃತಾ ಕ್ರಮ ಹಾಗೂ ಪೋಷಣ್ ಅಭಿಯಾನದಡಿ ಅನ್ನ ಪ್ರಾಶನ ಕಾರ್ಯಕ್ರಮ ನಡೆಯಿತು.

ರೋಟರಿ ಅಧ್ಯಕ್ಷೆ ರಾಧಿಕ ಲಕ್ಷ್ಮೀನಾರಾಯಣ್ ಕಾರ್ಯಕ್ರಮ ಉದ್ಘಾಟಿಸಿದರು.ಮಾಜಿ ಅಧ್ಯಕ್ಷ ಬಿ.ವಿ.ಲಕ್ಷ್ಮೀನಾರಾಯಣ ರೋಟರಿ ಕಾರ್ಯ ವೈಖರಿಯನ್ನು ವಿವರಿಸಿದರು. ಕಾರ್ಯದರ್ಶಿ ದೀಪಾ ಭಂಡಾರಿ ಗರ್ಭಿಣಿಯರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.

ದಿನೇಶ್ ಭಂಡಾರಿ, ರೋಟರಿ ವತಿಯಿಂದ ಗರ್ಭಿಣಿ, ಬಾಣಂತಿಯರಿಗೆ ಡ್ರೈ ಫ್ರೂಟ್ಸ್ ‌ಕಿಟ್ ಹಾಗೂ ಗೋದೋಡಿಯನ್ನು, ಮಕ್ಕಳಿಗೆ ಸ್ಟೀಲ್ ಬೌಲ್ ಮತ್ತು ಸ್ಪೂನ್, ಅಂಗನವಾಡಿ ಕೇಂದ್ರಕ್ಕೆ ಚಾಪೆ ಹಾಗೂ ಮಾಸ್ಕ್ ವಿತರಿಸಿದರು.

ಸ್ಥಳೀಯ ನಗರಸಭಾ ಸದಸ್ಯೆ ಭಾರತಿ ಪ್ರಶಾಂತ್, ಶಾಲಾ ಮುಖ್ಯೋಪಾ ಧ್ಯಾಯಿನಿ ವಿಮಲ, ಬಾಲವಿಕಾಸ ಸಮಿತಿ ಅಧ್ಯಕ್ಷೆ ವಾರಿಜ ಸ್ಥಳೀಯ ದಾನಿ ಗಳಿಂದ ನಿರ್ಮಾಣಗೊಂಡ ಹೆಚ್ಚುವರಿ ಕೊಠಡಿಯನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಪ್ರಮೋದ, ಸುಮಲತ, ಸಹಾಯಕಿ ಸಹನ, ಮೇಲ್ವಿಚಾರಕಿ ಶಾಂತಿ ಪ್ರಭು, ಶಾಲಾ ಶಿಕ್ಷಕರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ವಿವೇಕಾನಂದ ಸ್ವಾಗತಿಸಿ, ಪೋಷಣ್ ಅಭಿಯಾನ್ ಕಾರ್ಯಕ್ರಮದ ಮಹತ್ವ ಹಾಗೂ ಅನ್ನಪ್ರಾಶನದ ಕುರಿತು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News