ಕೊರೋನಾ ಲಸಿಕೆ: ಉಡುಪಿ ಜಿಲ್ಲೆಯಲ್ಲಿ ಶೇ.53 ಸಾಧನೆ

Update: 2021-01-16 16:04 GMT

ಉಡುಪಿ, ಜ.16: ಉಡುಪಿ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಆರು ಕೇಂದ್ರ ಗಳಲ್ಲಿ 538 ಮಂದಿಗೆ ಕೊರೋನಾ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಆದರೆ ಇದರಲ್ಲಿ ಕೇವಲ 286 ಮಂದಿ ಮಾತ್ರ ಲಸಿಕೆ ಪಡೆಯುವ ಮೂಲಕ ಶೇ.53.15ರಷ್ಟು ಸಾಧನೆ ಮಾಡಲಾಗಿದೆ.

ಶಾಸಕರು, ಡಿಸಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾಸ್ಪತ್ರೆಯ ಕೇಂದ್ರದಲ್ಲಿ ಈಗಾಗಲೇ ಪಟ್ಟಿ ಮಾಡಿರುವ 100 ಮಂದಿ ಆರೋಗ್ಯ ಕಾರ್ಯಕರ್ತರ ಪೈಕಿ ಕೇವಲ 53 ಮಂದಿ ಮಾತ್ರ ಲಸಿಕೆ ಪಡೆದುಕೊಂಡಿದ್ದಾರೆ. ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿರುವ ಕೇಂದ್ರದಲ್ಲಿ 100 ಮಂದಿಯ ಪೈಕಿ 43 ಮಂದಿ ಮಾತ್ರ ಲಸಿಕೆ ಸ್ವೀಕರಿಸಿದರು.

ಖಾಸಗಿ ಲಸಿಕಾ ಕೇಂದ್ರ ಆಗಿರುವ ಉಡುಪಿ ಟಿಎಂಎ ಪೈ ಆಸ್ಪತ್ರೆಯಲ್ಲಿ 100 ಮಂದಿಯ ಪೈಕಿ 83 ಮಂದಿ ಲಸಿಕೆ ಪಡೆದು ಕೊಂಡರು. ಇದು ಆರು ಕೇಂದ್ರಗಳಲ್ಲಿ ಅತಿಹೆಚ್ಚಿನ ಸಾಧನೆಯಾಗಿದೆ. ಪಟ್ಟಿ ಮಾಡಿರುವ ಉಳಿದ ಆರೋಗ್ಯ ಕಾರ್ಯಕರ್ತರು ಭಯದಿಂದ ಲಸಿಕೆ ಸ್ವೀಕರಿಸಲು ಹಿಂದೇಟು ಹಾಕಿದ್ದು, ಇವರಿಗೆ ಮುಂದಿನ ಹಂತದಲ್ಲಿ ಲಸಿಕೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News