ಮಂಗಳೂರು : ನೂತನ ಕೃಷಿ ಮಸೂದೆ ಹಿಂಪಡೆಯಲು ಒತ್ತಾಯಿಸಿ ಕ್ಯಾಂಪಸ್ ಫ್ರಂಟ್ ಪ್ರತಿಭಟನೆ

Update: 2021-01-16 16:37 GMT

ಮಂಗಳೂರು : ಕೇಂದ್ರ ಸರಕಾರ ಜಾರಿಗೆ ತಂದಿರುವ ನೂತನ ಕೃಷಿ ಮಸೂದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ಕ್ಯಾಂಪಸ್ ಫ್ರಂಟ್ ಮಂಗಳೂರು ಜಿಲ್ಲಾ ಸಮಿತಿ ವತಿಯಿಂದ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟಿಸಲಾಯಿತು.

ಈ ಸಂದರ್ಭ ಕ್ಯಾಂಪಸ್ ಫ್ರಂಟ್ ಮಂಗಳೂರು ಜಿಲ್ಲಾಧ್ಯಕ್ಷ ಹಸನ್ ಸಿರಾಜ್ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರಕಾರವು ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ವಿದ್ಯಾರ್ಥಿಗಳು, ದಲಿತರು, ಶಿಕ್ಷಕರು ಹೀಗೆ ವಿವಿಧ ವರ್ಗದ ಜನರ ಜೀವನ ಅಸ್ತವ್ಯಸ್ತವಾಗಿದೆ. ಈಗ ರೈತರ ಸರದಿ. ಸರಕಾರವು ಕಾರ್ಪೊರೇಟ್ ಶಕ್ತಿಗಳಾದ ಅಂಬಾನಿ - ಅದಾನಿಗಳ ಎಂಜಲು ಕಾಸಿನ ಹಣಕ್ಕಾಗಿ ರೈತರಿಗೆ ಮೋಸ ಮಾಡುತ್ತಿದೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅನರ್ಹ ಸಚಿವರು ಹಾಗೂ ಕೇಂದ್ರ ಸರಕಾರವು ಶೀಘ್ರವೇ ರೈತರ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಮಂಗಳೂರು ಜಿಲ್ಲಾ ಕೋಶಾಧಿಕಾರಿ ಶರ್ಫುದ್ದೀನ್ ಬಜ್ಪೆ , ಸಮಿತಿ ಸದಸ್ಯರಾದ ಅಶ್ರಫ್ , ಇಹ್ತಿಷಾಮ್ , ಅಶಂ ಹಾಗೂ ಮಂಗಳೂರು ಏರಿಯಾ ಅಧ್ಯಕ್ಷೆ ಮುರ್ಷಿದಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News