ಏಮ್ಸ್ ಆಸ್ಪತ್ರೆಯಲ್ಲಿ ಕೋವ್ಯಾಕ್ಸಿನ್ ಲಸಿಕೆ ಪಡೆದ ಭದ್ರತಾ ಸಿಬ್ಬಂದಿಗೆ ಅಲರ್ಜಿ,ಆಸ್ಪತ್ರೆಗೆ ದಾಖಲು

Update: 2021-01-17 07:46 GMT

ಹೊಸದಿಲ್ಲಿ: ಇಲ್ಲಿನ ಏಮ್ಸ್ ಆಸ್ಪತ್ರೆಯಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ಶನಿವಾರ ಕೊರೋನ ಪಿಡುಗಿನ ವಿರುದ್ಧ ನೀಡಲಾಗಿರುವ ಕೋವ್ಯಾಕ್ಸಿನ್ ಲಸಿಕೆಯನ್ನು ಸ್ವೀಕರಿಸಿದ ಬಳಿಕ ತೀವ್ರ ಅಡ್ಡಪರಿಣಾಮದ ಭಾಗವಾಗಿ ಅಲರ್ಜಿ ಕಾಣಿಸಿಕೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಭದ್ರತಾ ಸಿಬ್ಬಂದಿಯು ಶನಿವಾರ ಸಂಜೆ 4 ಗಂಟೆಗೆ ಏಮ್ಸ್ ನಲ್ಲಿ ಲಸಿಕೆ ಸ್ವೀಕರಿಸಿದ 15-20 ನಿಮಿಷಗಳ ಬಳಿಕ ಅಲರ್ಜಿಯಾಗಿ ಚರ್ಮದಲ್ಲಿ ದದ್ದುಗಳು ಕಾಣಿಸಿಕೊಂಡವು. ತಕ್ಷಣವೇ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದ್ದು, ಇದೀಗ ಅವರು ಸುಧಾರಿಸಿದ್ದಾರೆ. ಮುನ್ನಚ್ಚರಿಕೆಯ ಕ್ರಮವಾಗಿ ಅವರ ಮೇಲೆ ರಾತ್ರಿ ಇಡೀ ನಿಗಾವಹಿಸಲಾಗಿತ್ತು ಎಂದು ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ತಿಳಿಸಿದ್ದಾರೆ.
ಶನಿವಾರ ಆರಂಭವಾಗಿರುವ ಕೋವಿಡ್-19 ಚುಚ್ಚುಮದ್ದು ಅಭಿಯಾನದ ಮೊದಲ ದಿನ ದಿಲ್ಲಿಯಲ್ಲಿ ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗಿರುವ ಲಸಿಕೆಯ ಬಳಿಕ ಅಡ್ಡಪರಿಣಾಮಕ್ಕೆ ಸಂಬಂಧಿಸಿ  ಓರ್ವರಿಗೆ ಗಂಭೀರ, 51 ಸಣ್ಣ ಪ್ರಕರಣ ವರದಿಯಾಗಿದೆ ಎಂದು ಅಧಿಕೃತ ಅಂಕಿ-ಅಂಶಗಳು ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News