ನ್ಯಾಯಾಲಯಗಳು ಟೀಕೆಗಳಿಗೆ ಮುಕ್ತವಾಗಿರಬೇಕು: ಹರೀಶ್ ಸಾಳ್ವೆ

Update: 2021-01-17 09:09 GMT

ಅಹಮದಾಬಾದ್: ಆಡಳಿತ ಸಂಸ್ಥೆಯಾಗಿ ನ್ಯಾಯಾಲಯಗಳು ಸಾರ್ವಜನಿಕರ ಪರಿಶೀಲನೆ ಹಾಗೂ ಟೀಕೆಗಳಿಗೆ ಮುಕ್ತವಾಗಿರಬೇಕೆಂದು ಸುಪ್ರೀಂಕೋರ್ಟ್ ನ ಹಿರಿಯ ವಕೀಲ ಹರೀಶ್ ಸಾಳ್ವೆ ಹೇಳಿದ್ದಾರೆ.

ವೀಡಿಯೊ ಕಾನ್ಫರೆನ್ಸ್ ಮೂಲಕ ಅಹ್ಮದಾಬಾದ್ ನಲ್ಲಿ ಆಯೋಜಿಸಲಾಗಿರುವ ಉಪನ್ಯಾಸವನ್ನುದ್ದೇಶಿಸಿ ಮಾತನಾಡಿದ ಸಾಳ್ವೆ, ನ್ಯಾಯಾಧೀಶರು ಅಥವಾ ನ್ಯಾಯಾಲಯಗಳು, ವಿಶೇಷವಾಗಿ ಸಾಂವಿಧಾನಿಕ ನ್ಯಾಯಾಲಯಗಳು ಆಡಳಿತದ ಸಂಸ್ಥೆಗಳಾಗಿವೆ ಎಂದು ನಾವು ಇಂದು ಒಪ್ಪಿಕೊಂಡಿದ್ದೇವೆ. ಆಡಳಿತ ಸಂಸ್ಥೆಯಾಗಿ ಅದು ಸಾರ್ವಜನಿಕ ಪರಿಶೀಲನೆ ಹಾಗೂ ಸಾರ್ವಜನಿಕ ಟೀಕೆಗಳಿಗೆ ಮುಕ್ತವಾಗಿರಬೇಕು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News