ವ್ಯಕ್ತಿಯ ಕಪಾಳಕ್ಕೆ ಬಾರಿಸಿದ ನಟ ಮಹೇಶ್ ಮಾಂಜ್ರೇಕರ್ ವಿರುದ್ಧ ಪ್ರಕರಣ ದಾಖಲು

Update: 2021-01-17 09:53 GMT

ಮುಂಬೈ:ಪುಣೆಯಲ್ಲಿ ವಾಹನಗಳ ನಡುವೆ ಢಿಕ್ಕಿಯಾದ ಬಳಿಕ ವ್ಯಕ್ತಿಯೊಬ್ಬನಿಗೆ ಕಪಾಳಕ್ಕೆ ಬಾರಿಸಿ, ನಿಂದಿಸಿದ ಆರೋಪದಲ್ಲಿ ಚಿತ್ರ ನಿರ್ಮಾಪಕ ಮಹೇಶ್ ಮಾಂಜ್ರೇಕರ್ ವಿರುದ್ಧ ಪ್ರಕರಣ ದಾಖಲಾಗಿದೆ.

ಮಾಂಜ್ರೇಕರ್ ವಿರುದ್ಧ ದಾಖಲಾಗಿರುವ ಪ್ರಕರಣದ ಪ್ರಕಾರ, ಘಟನೆಯು ಪುಣೆ-ಸೋಲಾಪುರ ಹೆದ್ದಾರಿಯಲ್ಲಿ ಯಾವತ್ ಗ್ರಾಮದ ಸಮೀಪ ಘಟನೆ ನಡೆದಿದೆ.
ತನ್ನ ವಾಹನವು ಮಹೇಶ್ ಮಾಂಜ್ರೇಕರ್ ಕಾರಿಗೆ ಹಿಂದಿನಿಂದ ಢಿಕ್ಕಿಯಾಗಿದೆ. ಮಾಂಜ್ರೇಕರ್ ಏಕಾಏಕಿ ಬ್ರೇಕ್ ಹಾಕಿದ ಕಾರಣ ಢಿಕ್ಕಿ ಸಂಭವಿಸಿದೆ. ಘಟನೆಯ ಬಳಿಕ ಕಾರಿನಿಂದ ಇಳಿದ ಮಾಂಜ್ರೇಕರ್ ನನ್ನೊಂದಿಗೆ ಜಗಳಕ್ಕೆ ನಿಂತರು. ಬಳಿಕ ಕಪಾಳಕ್ಕೆ ಬಾರಿಸಿ ನಿಂದಿಸಿದರು. ಆ ನಂತರ ನಾನು ದೂರು ದಾಖಲಿಸಿದ್ದೇನೆ ಎಂದು ದೂರುದಾರ ಕೈಲಾಸ್ ಸತ್ಪುತೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News