ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ: ‘ಕಂತು’ ನಾಟಕಕ್ಕೆ ಪ್ರಶಸ್ತಿ
ಉಡುಪಿ, ಜ.17: ಉಡುಪಿ ರಂಗಭೂಮಿ ವತಿಯಿಂದ ಹಮ್ಮಿಕೊಳ್ಳಲಾದ 41ನೆಯ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ-2020ರ ಪ್ರಥಮ ಬಹು ಮಾನವನ್ನು ಸಮಷ್ಠಿ ಬೆಂಗಳೂರು ತಂಡದ ‘ಕಂತು’ ನಾಟಕ ಗೆದ್ದುಕೊಂಡಿದೆ.
ಈ ತಂಡವು ಪಿ.ವಿ.ಎಸ್.ಬೀಡೀಸ್ ಪ್ರಾಯೋಜಿತ ದಿ.ಪುತ್ತು ವೈಕುಂಠ ಶೇಟ್ ಸ್ಮಾರಕ ಪ್ರಥಮ ನಗದು ಬಹುಮಾನ 35,000ರೂ. ಮತ್ತು ಸ್ಮರಣಿಕೆ ಹಾಗೂ ಡಾ.ಟಿ.ಎಂ.ಎ.ಪೈ ಸ್ಮಾರಕ ಪರ್ಯಾಯ ಫಲಕವನ್ನು ಸತತವಾಗಿ ಮೂರನೆ ಬಾರಿಗೆ ತನ್ನದಾಗಿಸಿಕೊಂಡಿದೆ.
ದ್ವಿತೀಯ ಬಹುಮಾನವಾದ ದಿ.ಮಲ್ಪೆಮಧ್ವರಾಜ್ ಸ್ಮಾರಕ ಪ್ರಮೋದ್ ಮಧ್ವರಾಜ್ ಕೊಡುಗೆಯಾದ 25,000ರೂ. ನಗದು ಬಹುಮಾನ ಮತ್ತು ಸ್ಮರಣಿಕೆ ಹಾಗೂ ಡಾ.ಆರ್.ಪಿ.ಕೊಪ್ಪೀಕರ್ ಸ್ಮಾರಕವು ಸಮುದಾಯ ಧಾರ ವಾಡ ತಂದ ‘ತಲೆದಂಡ’ ನಾಟಕಕ್ಕೆ ಲಭಿಸಿದೆ.
ಸುಮನಸ ಕೊಡವೂರು ಉಡುಪಿ ತಂಡದ ‘ನೆರಳಿಲ್ಲದ ಮನುಷ್ಯರು’ ನಾಟಕವು ತೃತೀಯ ಬಹುಮಾನವನ್ನು ಪಡೆದುಕೊಂಡಿದ್ದು, ದಿ.ಪಿ.ವಾಸುದೇವ ರಾವ್ ಸ್ಮರಣಾರ್ಥ ಸೀತಾ ವಾಸುದೇವ ರಾವ್ ಕೊಡುಗೆಯಾದ 15,000 ರೂ. ನಗದು ಬಹುಮಾನ ಮತ್ತು ಸ್ಮರಣಿಕೆ ದೊರೆತಿದೆ.
ಇತರ ಬಹುಮಾನಗಳ ವಿವರ ಈ ರೀತಿ ಇದೆ
ಶ್ರೇಷ್ಠ ನಿರ್ದೇಶನ: ಪ್ರ-ಮಂಜುನಾಥ ಎಲ್.ಬಡಿಗೇರ(‘ಕಂತು’ ನಾಟಕ), ದ್ವಿ-ಮಹದೇವ ಹಡಪದ(ತಲೆದಂಡ), ತೃ-ಜೆ.ಜೋಸೆಫ್(ನೆರಳಿಲ್ಲದ ಮನುಷ್ಯರು). ಶ್ರೇಷ್ಠ ನಟ: ಪ್ರ-ಈರಣ್ಣ ಐನಾಪುರ(ತಲೆದಂಡ-ಬಿಜ್ಜಳ ಪಾತ್ರ ಧಾರಿ), ದ್ವಿ- ಪರಮೇಶ್ವರ್ ಕೆ.(ಕಂತು- ಸದಾನಂದ ಮಾಸ್ತರ್ ಪಾತ್ರಧಾರಿ), ತೃ: ಹರಿ ಸಮಷ್ಠಿ(ಕಂತು- ಪಾಂಡುರಂಗರಾಯ ಪಾತ್ರಧಾರಿ). ಶ್ರೇಷ್ಠ ನಟಿ: ಪ್ರ-ಸೌಮ್ಯಶ್ರೀ ಮಾರ್ನಾಡ್(ಕಂತು -ಕಾವೇರಿ ಪಾತ್ರಧಾರಿಣಿ), ದ್ವಿ-ರಾಧಿಕಾ ದಿವಾಕರ್(ನೆರಳಿಲ್ಲದ ಮನುಷ್ಯರು-ಅಜಿತ ಪಾತ್ರಧಾರಿಣಿ), ತೃ-ಕಿರಣ (ಕಂತು-ಸರಸ್ವತಿ/ಕಾತ್ಯಾಯಿನಿ ಪಾತ್ರಧಾರಿಣಿ).
ಶ್ರೇಷ್ಠ ಸಂಗೀತ: ಪ್ರ-ಮೈಸೂರು ಜಿಪಿಐಇಆರ್ ರಂಗತಂಡದ ‘ಮಂಟೇ ಸ್ವಾಮಿ ಕಥಾ ಪ್ರಸಂಗ’ ನಾಟಕ, ದ್ವಿ- ಕಂತು, ತೃ- ತಲೆದಂಡ. ಶ್ರೇಷ್ಠ ರಂಗಸಜ್ಜಿಕೆ ಮತ್ತು ರಂಗಪರಿಕರ: ಪ್ರ-ಕಂತು, ದ್ವಿ- ತಲೆದಂಡ, ತೃ-ನೆರಳಿಲ್ಲದ ಮನುಷ್ಯರು, ಶ್ರೇಷ್ಠ ಪ್ರಸಾಧನ: ಪ್ರ- ಕಂತು, ದ್ವಿ- ತಲೆದಂಡ, ತೃ- ಮಂಟೇಸ್ವಾಮಿ ಕಥಾ ಪ್ರಸಂಗ. ಶ್ರೇಷ್ಠ ರಂಗಬೆಳಕು: ಪ್ರ-ಕಂತು, ದ್ವಿ- ನೆರಳಿಲ್ಲದ ಮನುಷ್ಯರು, ತೃ- ತಲೆದಂಡ. ಶ್ರೇಷ್ಠ ಹಾಸ್ಯ ನಟನೆ: ಪ್ರ-ಹರೀಶ್ ರುದ್ರಯ್ಯ(ಕಂತು-ಬುಗುರಿ ಪಾತ್ರಧಾರಿ), ಮೆಚ್ಚುಗೆ ಬಹುಮಾನಗಳು: ಕಂತು ನಾಟಕದ ತರ್ಕಶಾಸ್ತ್ರಿ ಪಾತ್ರಧಾರಿ ಶಿವಾನಂದ ಜಿ.ಕೆ., ಮಂಟೇಸ್ವಾಮಿ ಕಥಾ ಪ್ರಸಂಗ ನಾಟಕದ ಮಂಟೇಸ್ವಾಮಿ ಪಾತ್ರಧಾರಿ ನವೀನ್ ನೇತಾಜಿ, ನೆರಳಿಲ್ಲದ ಮನುಷ್ಯರು ನಾಟಕದ ುಂಟಿಯಾ ಪಾತ್ರಧಾರಿ ದಿವಾಕರ್ ಕಟೀಲ್
ಸ್ಪರ್ಧೆಯ ತೀರ್ಪುಗಾರರಾಗಿ ಪ್ರೊ.ವಸಂತ ಬನ್ನಾಡಿ, ಚಂದ್ರಹಾಸ ಉಳ್ಳಾಲ, ಬೆಳಗೋಡು ರಮೇಶ್ ಭಟ್, ಪ್ರತಿಭಾ ಎಂ.ವಿ., ಗಣೇಶ್ ಮಂದರ್ತಿ ಸಹಕರಿಸಿದ್ದರು. ರಂಗಭೂಮಿ ಪ್ರಶಸ್ತಿ ಪ್ರಧಾನ ಸಮಾರಂಭವು ಫೆ.13 ಮತ್ತು ನಾಟಕ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವು ಫೆ.14ರಂದು ಉಡುಪಿ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ. ಅಂದು ಪ್ರಥಮ ಪ್ರಶಸ್ತಿ ಪುರಸ್ಕೃತ ಕಂತು ನಾಟಕದ ಮರು ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.