ಬೈಂದೂರು ಹಿರಿಯ ನಾಗರಿಕರ ವೇದಿಕೆ ಸಭೆ

Update: 2021-01-17 15:12 GMT

ಬೈಂದೂರು, ಜ.17: ಬೈಂದೂರು ತಾಲೂಕು ಹಿರಿಯ ನಾಗರಿಕರ ವೇದಿಕೆ ಯ ಸರ್ವ ಸದಸ್ಯರ ಸಭೆಯು ಬೈಂದೂರು ಬಂಕೇಶ್ವರದ ಮಹಾಕಾಳಿ ದೇವಸ್ಥಾನದ ಸಭಾಂಗಣದಲ್ಲಿ ಜ.16ರಂದು ಜರಗಿತು.

ಮುಖ್ಯ ಅತಿಥಿಯಾಗಿ ಕುಂದಾಪುರ ತಾಲೂಕು ಅಂಗವಿಕಲರ ಗ್ರಾಮೀಣ ವಿವಧೋದ್ದೇಶ ಪುನರ್ವಸತಿ ಕಾರ್ಯಕರ್ತ ಮಂಜು ನಾಥ ಹೆಬ್ಬಾರ್ ಕಾಲ್ತೋಡು ಹಿರಿಯ ನಾಗರಿಕರಿಗೆ ಸರಕಾರದಿಂದ ದೊರಕುವ ವಿವಿಧ ಸೌಲಭ್ಯ ಗಳನ್ನು ವಿವರಿಸಿದರು.
ನಿಕಟ ಪೂರ್ವ ಅಧ್ಯಕ್ಷ ಎಚ್.ವಸಂತ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ ದರು. ನೂತನ ಸದಸ್ಯರಾಗಿ ಸೇರ್ಪಡೆಗೊಂಡ ಐ.ನಾರಾಯಣ, ಸತೀಶ ವಾಮನ ಪೈ, ಎಲ್.ಗಣಪಯ್ಯ ಶೇರುಗಾರ ಪಡುವರಿ, ಶೇಷಗಿರಿ ಮಾಸ್ಟರ್ ಬೈಂದೂರು, ರಾಮಚಂದ್ರ ಭಟ್ ಕಾವೇರಿಮಾರ್ ಇವರನ್ನು ಅಭಿನಂದಿಸ ಲಾಯಿತು.

ರಾಮಕೃಷ್ಣ ಪಡುವರಿ ಮಾತನಾಡಿದರು. ಕಾರ್ಯದರ್ಶಿ ಕೆ.ಸಂಜೀವ ಆಚಾರ್ಯ ಚಟುವಟಿಕೆ ವರದಿಯನ್ನು ಮಂಡಿಸಿದರು. ಎಚ್. ವಸಂತ ಹೆಗ್ಡೆ ಬೈಂದೂರು ಅವರನ್ನು ಹಿರಿಯ ನಾಗರಿಕರ ವೇದಿಕೆಯ ಗೌರವ ಅಧ್ಯಕ್ಷರ ಆಯ್ಕೆಗಾಗಿ ಸೂಚಿಸಲಾಯಿತು. ವೆಂಕಟೇಶ ಕೋಣಿ ಅತಿಥಿಗಳನ್ನು ಪರಿಚಯಿಸಿ ದರು.ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಎಂ.ಗೋವಿಂದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಅಧ್ಯಾಪಕ ರಾಮ ಶೇರುಗಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News