ಅಕ್ರಮ ಕೋವಿ ಹೊಂದಿದ್ದ ಓರ್ವನ ಬಂಧನ

Update: 2021-01-17 15:21 GMT

ಹೆಬ್ರಿ, ಜ.17: ಅಕ್ರಮವಾಗಿ ಕೋವಿ ಹೊಂದಿದ್ದ ವ್ಯಕ್ತಿಯೋರ್ವನನ್ನು ಹೆಬ್ರಿ ಪೊಲೀಸರು ಜ.17ರಂದು ಬೆಳಗ್ಗೆ ಬೆಂಡುಗುಡ್ಡೆಯಿಂದ ಪರಂಗಿಬೈಲು ಕಡೆಗೆ ಹೋಗುವ ರಸ್ತೆಯಲ್ಲಿ ಬಂಧಿಸಿದ್ದಾರೆ.

ಮುದ್ರಾಡಿ ಗ್ರಾಮದ ಬಲ್ಲಾಡಿ ಪರಂಗಿಬೈಲು ನಿವಾಸಿ ಸಂತೋಷ ಗೌಡ ಬಂಧಿತ ಆರೋಪಿ. ಈತ ಪರವಾನಿಗೆ ಇಲ್ಲದೆ ಅಕ್ರಮ ವಾಗಿ ಕೋವಿಯನ್ನು ಹಿಡಿದುಕೊಂಡು ಹೋಗುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News