ಯುವಕ ಆತ್ಮಹತ್ಯೆ
Update: 2021-01-17 23:23 IST
ಪಡುಬಿದ್ರಿ : ಕುಡಿತದ ಚಟ ಹೊಂದಿದ್ದ ಬಾಗಲಕೊಟೆ ಮೂಲದ ಕಾರ್ಮಿಕನೋರ್ವ ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಅದಮಾರು ರೈಲ್ವೆ ಹಳಿ ಬಳಿ ರವಿವಾರ ನಡೆದಿದೆ.
ಹುಲ್ಲಪ್ಪ ಎಂ ಮೇಟಿ(31) ಆತ್ಮಹತ್ಯೆ ಮಾಡಿಕೊಂಡಿದ್ದು, ತೆಂಕ ಗ್ರಾಮದ ಬಾಡಿಗೆ ಮನೆಯಲ್ಲಿ ಕುಟುಂಬದವರೊಂದಿಗೆ ವಾಸವಾ ಗಿದ್ದ ಹುಲ್ಲಪ್ಪ ಕೂಲಿ ಕೆಲಸ ಮಡಿಕೊಂಡಿದ್ದ. ಮದ್ಯವ್ಯಸನಿಯಾಗಿ, ಮಾನಸಿಕ ಖಿನ್ನತೆಗೊಳಗಾಗಿದ್ದ ಆತ ರವಿವಾರ ಮುಂಜಾವ 3.30ಕ್ಕೆ ಅದಮಾರು ರೈಲ್ವೆ ಹಳಿ ಬಳಿ ತೆರಳಿ ಸಹೋದರನಿಗೆ ಕರೆ ಮಾಡಿ ಆತ್ಮಹತ್ಯೆ ಮಾಡುವುದಾಗಿ ತಿಳಿಸಿದ್ದ. 5.30ರ ಸುಮಾರಿಗೆ ಮನೆಯವರು ಹುಡುಕಾಡಿದಾಗ ಅತನ ಮೃತದೇಹ ರೈಲ್ವೆ ಹಳಿ ಬಳಿ ಪತ್ತೆಯಾಗಿದೆ.
ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.