×
Ad

ನಿರಂತರ 7 ವರ್ಷ ಮಗಳ ಮೇಲೆ ಅತ್ಯಾಚಾರವೆಸಗಿದ ತಂದೆ: ಆರೋಪಿಯ ಸೆರೆ

Update: 2021-01-18 12:04 IST

ಹಿಸಾರ್,ಜ.18: ದೇಶಾದ್ಯಂತ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು, ತಂದೆಯೋರ್ವ ತನ್ನ ಸ್ವಂತ ಮಗಳನ್ನೇ ನಿರಂತರ 7 ವರ್ಷಗಳ ಕಾಲ ಅತ್ಯಾಚಾರ ಮಾಡಿದ ಘಟನೆಯು ಹರ್ಯಾಣದ ಹಿಸಾರ್ ನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು timesofindia.com ವರದಿ ಮಾಡಿದೆ.

17 ರ ಹರೆಯದ ಮಗಳ ಮೇಲೆ ಕಳೆದ ಏಳು ವರ್ಷಗಳಿಂದ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದು, ಈ ಕುರಿತು ಬಾಲಕಿಯು ಪ್ರತಿರೋಧಿಸಿದಾಗ ಕೊಲೆ ಬೆದರಿಕೆಯನ್ನೂ ಹಾಕಿದ್ದಾನೆಂದು ಬಾಲಕಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಮಾತ್ರವಲ್ಲದೇ 11 ರ ಹರೆಯದ ಇನ್ನೋರ್ವ ಪುತ್ರಿಯ ಮೇಲೂ ಅತ್ಯಾಚಾರಗೈಯಲು ಪ್ರಾರಂಭಿಸಿದ್ದ ಎಂದು ಬಾಲಕಿಯು ಹೇಳಿಕೆ ನೀಡಿದ್ದಾಗಿ ವರದಿ ತಿಳಿಸಿದೆ.

ಅತ್ಯಾಚಾರದ ಪರಿಣಾಮ ಗರ್ಭ ಧರಿಸಿದ್ದ ಬಾಲಕಿಯನ್ನು ಗರ್ಭಪಾತ ಮಾಡಿಸಲಾಗಿದೆ ಎಂದೂ ಬಾಲಕಿ ಆರೋಪಿಸಿದ್ದಾಳೆ. ತನ್ನ ತಂದೆಯು ಸರಕಾರಿ ಅಧಿಕಾರಿಯೋರ್ವರೊಂದಿಗೆ ಕೆಲಸ ಮಾಡುತ್ತಿದ್ದು, ತನ್ನ ಮೇಲೆ ನಿರಂತರ ಏಳು ವರ್ಷಗಳಿಂದ ಅತ್ಯಾಚಾರ ನಡೆಸುತ್ತಿದ್ದಾರೆ ಎಂದು ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News