ಉಡುಪಿ: ಕೊರೋನ ಲಸಿಕೆ ಪಡೆದ 48 ಮಂದಿ

Update: 2021-01-18 14:14 GMT

ಉಡುಪಿ, ಜ.18: ಉಡುಪಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾತ್ರ ಸೋಮವಾರ ಕೊರೋನಾ ವಿರುದ್ಧದ ‘ಕೊವಿಶೀಲ್ಡ್’ ಲಸಿಕೆಯನ್ನು ನೀಡಲಾಗಿದ್ದು, ನಿಗದಿತ 100 ಮಂದಿಯಲ್ಲಿ 48 ಮಂದಿ ಇವುಗಳನ್ನು ಪಡೆದಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಲಸಿಕೆ 48 ಮಂದಿಯಲ್ಲಿ ಯಾರಲ್ಲೂ ಅಡ್ಡಪರಿಣಾಮದ ದೂರು ಬಂದಿಲ್ಲ. ಉಳಿದವರು ಒಂದೆರಡು ದಿನಗಳಲ್ಲಿ ಬಂದು ಲಸಿಕೆ ಪಡೆಯುವುದಾಗಿ ತಿಳಿಸಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಆರು ಕೇಂದ್ರಗಳಲ್ಲಿ ನಿಗದಿತ ಗುರಿಯಾದ 538 ಮಂದಿಯಲ್ಲಿ ಈವರೆಗೆ ಒಟ್ಟು 374 ಮಂದಿಗೆ ಕೊರೋನಾ ಲಸಿಕೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಇಂದು ಯುಪಿಎಚ್‌ಸಿ ಕೇಂದ್ರವೊಂದನ್ನು ಹೊರತು ಪಡಿಸಿ ಉಳಿದ ಯಾವುದೇ ಕೇಂದ್ರದಲ್ಲೂ ಲಸಿಕೆಯನ್ನು ನೀಡಿಲ್ಲ. ಜ.19ರಂದು ಮಣಿಪಾಲ ಕಸ್ತೂರ್‌ಬಾ ಆಸ್ಪತ್ರೆಯ ಮೂರು ಕೇಂದ್ರಗಳಲ್ಲಿ ಒಟ್ಟು 300 ಮಂದಿಗೆ ‘ಕೊವಿಶೀಲ್ಡ್’ ಲಸಿಕೆ ನೀಡಲಾಗುವುದು ಎಂದು ಡಾ.ಸೂಡ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News