ಉಡುಪಿ ನಗರಸಭೆಗೆ ನಾಮನಿರ್ದೇಶಿತ ಸದಸ್ಯರ ನೇಮಕ
Update: 2021-01-18 20:00 IST
ಉಡುಪಿ, ಜ.18: ಉಡುಪಿ ನಗರಸಭೆಗೆ ಐದು ಮಂದಿ ಸದಸ್ಯರನ್ನು ನಾಮ ನಿರ್ದೇಶನ ಮಾಡಿ ರಾಜ್ಯ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಮಲ್ಪೆ ವಡಭಾಂಡೇಶ್ವರದ ವಿಜಯ ಕುಂದರ್, ಉಡುಪಿ ಕಿನ್ನಿಮುಲ್ಕಿಯ ದೇವದಾಸ್ ಶೆಟ್ಟಿ, ಪುತ್ತೂರು ಸುಬ್ರಹ್ಮಣ್ಯ ನಗರದ ದಿನೇಶ್ ಪೈ, ಪುತ್ತೂರು ಕುದ್ಮಲ್ ರಂಗರಾವ್ ನಗರದ ಸುಬೇದಾ, ಮೂಡುಪೆರಂಪಳ್ಳಿಯ ಅರುಣಾ ಎಸ್.ಪೂಜಾರಿ ಅವರನ್ನು ಸದಸ್ಯರ ನ್ನಾಗಿ ನೇಮಕ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.